ADVERTISEMENT

ಚೀನಾ ಗಡಿ ಸಂಘರ್ಷ: ಹವಾಲ್ದಾರ್ ಪಳನಿ ಹುತಾತ್ಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜೂನ್ 2020, 15:07 IST
Last Updated 16 ಜೂನ್ 2020, 15:07 IST
ಹವಾಲ್ದಾರ್ ಪಳನಿ
ಹವಾಲ್ದಾರ್ ಪಳನಿ   

ಚೆನ್ನೈ: ಚೀನಾ ಪಡೆಗಳೊಂದಿಗೆ ಸೋಮವಾರ ರಾತ್ರಿ ಲಡಾಖ್‌ನ ಪೂರ್ವಭಾಗದ ಗಲ್ವಾನ್‌ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ತಮಿಳುನಾಡು ಮೂಲದ ಹವಾಲ್ದಾರ್ ಪಳನಿ (40) ಹುತಾತ್ಮರಾಗಿದ್ದಾರೆ.

ಪಳನಿ ಅವರು ರಾಮನಾಥಪುರಂ ಜಿಲ್ಲೆಯ ಕಡುಕ್ಕಳರ್ ಗ್ರಾಮದವರಾಗಿದ್ದಾರೆ.

ಪಳನಿ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರು 18 ವರ್ಷ ವಯಸ್ಸಿನವರಾಗಿದ್ದಾಗಲೇ ಸೇನೆ ಸೇರಿದ್ದರು. ಕೆಲ ದಿನಗಳ ಹಿಂದಷ್ಟೇ ಪತ್ನಿ ವಸಂತಿ ದೇವಿಗೆ ಕರೆ ಮಾಡಿ ಮಾತನಾಡಿದ್ದ ಪಳನಿ ಅವರು, ಇನ್ನು ಕೆಲವು ದಿನಗಳ ಮಟ್ಟಿಗೆ ಮಾತನಾಡುವುದು ಸಾಧ್ಯವಾಗದು ಎಂದೂ ಹೇಳಿದ್ದರು ಎನ್ನಲಾಗಿದೆ. ಪಳನಿ ಅವರ ಸಹೋದರನೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರೇ ಕುಟುಂಬದವರಿಗೆ ಪಳನಿ ಹುತಾತ್ಮರಾಗಿರುವ ಮಾಹಿತಿ ನೀಡಿದ್ದಾರೆ.

ತಮಿಳುನಾಡು ಸಿಎಂ ಸಂತಾಪ: ಪಳನಿ ಅವರ ಸಾವಿಗೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಸಂತಾಪ ಸೂಚಿಸಿದ್ದಾರೆ. ಜತೆಗೆ, ಹುತಾತ್ಮರ ಕುಟುಂಬದವರಿಗೆ ₹20 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.