ADVERTISEMENT

ಲಡಾಖ್‌ ಬಗ್ಗೆ ಭಾರತದ ನಿರ್ಧಾರ ನಮ್ಮ ಸಾರ್ವಭೌಮತ್ವಕ್ಕೆ ಧಕ್ಕೆ: ಚೀನಾ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 6:23 IST
Last Updated 1 ನವೆಂಬರ್ 2019, 6:23 IST
   

ನವದೆಹಲಿ:ಭಾರತ ಸರ್ಕಾರಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಘೊಷಣೆ ಮಾಡಿರುವುದುಭಾರತ ಮತ್ತು ಚೀನಾ ದೇಶಗಳ ನಡುವಿನ ವಾಗ್ವಾದಕ್ಕೆ ದಾರಿ ಮಾಡಿಕೊಟ್ಟಿದೆ.

'ಜಮ್ಮು ಮತ್ತು ಕಾಶ್ಮೀರಕ್ಕೆನೀಡಲಾಗಿದ್ದವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದುಕಾನೂನು ಬಾಹಿರ, ಈಪ್ರದೇಶದಲ್ಲಿ ಚೀನಾ ಆಡಳಿತಕ್ಕೆಒಳಪಟ್ಟ ಭೂ ಪ್ರದೇಶಗಳಿವೆ, ಭಾರತ ಸರ್ಕಾರವುಲಡಾಖ್‌ನ ಬಗ್ಗೆ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರವು ಚೀನಾದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿದೆಎಂದು ಚೀನಾದವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್‌ ಶುಂಗ್‌ ಹೇಳಿದ್ದಾರೆ.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವಾಲಯವು ‘ಜಮ್ಮು ಮತ್ತು ಕಾಶ್ಮೀರದಪುನರ್ವಿಂಗಡಣೆಯುನಮ್ಮ ಆಂತರಿಕ ವಿಚಾರ, ನಮ್ಮ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯಾಗಿದ್ದು ಇದನ್ನುಬೇರೆ ದೇಶಗಳು ಗೌರವಿಸಬೇಕು ಎಂದು ಹೇಳಿದೆ.

ADVERTISEMENT

ಚೀನಾ ಅಕ್ರಮವಾಗಿಜಮ್ಮುಮತ್ತು ಕಾಶ್ಮೀರ,ಲಡಾಖ್‌ನ ಕೆಲವು ಪ್ರದೇಶಗಳನ್ನು ಆಕ್ರಮಿಸಿ ಕೊಂಡಿದೆ. ಇದು ಮಾತ್ರವಲ್ಲ, ಪಾಕ್‌ ಆಕ್ರಮಿತಕಾಶ್ಮೀರದ ಕೆಲವು ಪ್ರದೇಶಗಳನ್ನು ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡಿದೆಎಂದು ವಿದೇಶಾಂಗ ಸಚಿವಾಲಯಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.