ADVERTISEMENT

ಕ್ಸಿನ್‌ಜಿಯಾಂಗ್ ಪ್ರವಾಸ: ಲಡಾಖ್ ಗಡಿಯಲ್ಲಿ ಯೋಧರ ಭೇಟಿ ಮಾಡಿದ ಜಿನ್‌ಪಿಂಗ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 14:42 IST
Last Updated 16 ಜುಲೈ 2022, 14:42 IST
ಷಿ ಜಿನ್‌ಪಿಂಗ್
ಷಿ ಜಿನ್‌ಪಿಂಗ್   

ಬೀಜಿಂಗ್ (ಪಿಟಿಐ): ಲಡಾಖ್‌ ಗಡಿಗೆ ಹೊಂದಿಕೊಂಡಿರುವ ಕ್ಸಿನ್‌ಜಿಯಾಂಗ್ ಪ್ರದೇಶಕ್ಕೆ ಭೇಟಿ ನೀಡಿದ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌, ಸೈನಿಕರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿದರು.

ಭಾನುವಾರ ಭಾರತ ಮತ್ತು ಚೀನಾ ಮಿಲಿಟರಿ ಮಟ್ಟದ ಅಧಿಕಾರಿಗಳ ನಡುವೆ 16ನೇ ಸುತ್ತಿನ ಮಾತುಕತೆ ನಡೆಯಲಿದೆ. ಹೀಗಾಗಿ, ಗಡಿಯಲ್ಲಿನ ಯೋಧರು ಹಾಗೂ ಸೇನಾಧಿಕಾರಿಗಳನ್ನು ಷಿ ಅವರು ಭೇಟಿ ಮಾಡಿರುವುದಕ್ಕೆ ಮಹತ್ವ ಬಂದಿದೆ.

ಕೇಂದ್ರೀಯ ಸೇನಾ ಆಯೋಗದ (ಸಿಎಂಸಿ) ಮುಖ್ಯಸ್ಥರಾಗಿರುವ ಷಿ ಅವರು ಶುಕ್ರವಾರ ಕ್ಸಿನ್‌ಜಿಯಾಂಗ್‌ನಲ್ಲಿ ನೆಲೆಸಿರುವ ಅಧಿಕಾರಿಗಳು ಮತ್ತು ಸೈನಿಕರ ಪ್ರತಿನಿಧಿಗಳನ್ನು ಭೇಟಿ ಮಾಡಿ, ಗಡಿ ರಕ್ಷಣೆ ಮತ್ತು ಪ್ರಾಂತ್ಯದ ಆಡಳಿತದಲ್ಲಿ ಸ್ಥಿರತೆ ಕಾಪಾಡುವಲ್ಲಿನ ಅವರ ಕೊಡುಗೆಯನ್ನು ಶ್ಲಾಘಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.