ADVERTISEMENT

ಭಾರಿ ಪ್ರಮಾಣದಲ್ಲಿ ಬಲ ಹೆಚ್ಚಿಸಿಕೊಳ್ಳಲು ಸಿದ್ಧವಾದ CISF: ಕಾರಣ ಏನು?

ಪಿಟಿಐ
Published 5 ಆಗಸ್ಟ್ 2025, 14:12 IST
Last Updated 5 ಆಗಸ್ಟ್ 2025, 14:12 IST
<div class="paragraphs"><p>ಸಿಐಎಸ್‌ಎಫ್ ಸಿಬ್ಬಂದಿ</p></div>

ಸಿಐಎಸ್‌ಎಫ್ ಸಿಬ್ಬಂದಿ

   

ನವದೆಹಲಿ: ಕೇಂದ್ರ ಗೃಹ ಇಲಾಖೆ ಅಡಿ ಕಾರ್ಯನಿರ್ವಹಿಸುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಒಟ್ಟು ಸಿಬ್ಬಂದಿ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಲಾಗುತ್ತಿದೆ.

ಸಿಐಎಸ್‌ಎಫ್‌ನ ಒಟ್ಟು ಬಲವನ್ನು 2.20 ಲಕ್ಷಕ್ಕೆ ಹೆಚ್ಚಿಸಲು ಗೃಹ ಇಲಾಖೆ ಸಿಐಎಸ್‌ಎಫ್‌ ಮುಖ್ಯಸ್ಥರಿಗೆ ಹಸಿರು ನಿಶಾನೆ ತೋರಿದೆ.

ADVERTISEMENT

ಸದ್ಯ ಸಿಐಎಸ್‌ಎಫ್‌ನ ಒಟ್ಟು ಬಲ 1.62 ಲಕ್ಷ.

ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಸರ್ಕಾರಿ, ಅರೆ ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ, ಗಣಿಗಳಿಗೆ, ಜಲಾಶಯಗಳಿಗೆ, ಸಂಸ್ಥೆಗಳಿಗೆ ಭದ್ರತೆ ನೀಡಲು ಹಾಗೂ ಪಹಲ್ಗಾಮ್ ದಾಳಿಯ ನಂತರ ದೇಶದ ವಿವಿಧ ಕಡೆಯ ಸರ್ಕಾರಿ, ಅರೆ ಸರ್ಕಾರಿ ಉದ್ಯಮಗಳ ಮುಖ್ಯಸ್ಥರಿಂದ ಸಿಐಎಸ್‌ಎಫ್‌ ಭದ್ರತೆಗಾಗಿ ಬೇಡಿಕೆ ಬಂದಿರುವುದು ಮತ್ತು ಜಮ್ಮು ಕಾಶ್ಮೀರದ ಜೈಲುಗಳಿಗೆ ಭದ್ರತೆ ನೀಡಲು ಸಿಐಎಸ್‌ಎಫ್ ಸಿಬ್ಬಂದಿ ಬೇಕಾಗಿರುವುದರಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಲವನ್ನು ಹೆಚ್ಚಿಸುತ್ತಿರುವುದಕ್ಕೆ ಕಾರಣ ಎನ್ನಲಾಗಿದೆ.

2026ರ ಮಾರ್ಚ್‌ ಒಳಗೆ ದೇಶವನ್ನು ನಕ್ಸಲ್ ಮುಕ್ತ ಮಾಡಲು ಕೇಂದ್ರ ಗೃಹ ಇಲಾಖೆ ಪಣ ತೊಟ್ಟು ಆ ನಿಟ್ಟಿನಲ್ಲಿ ಭಾರಿ ಯಶಸ್ಸು ಸಾಧಿಸಿರುವುದರಿಂದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿಯೂ ಇನ್ಮುಂದೆ ಸಿಐಎಸ್‌ಎಫ್ ಯೋಧರು ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ಈ ವರ್ಷ 14 ಸಾವಿರ ಸಿಬ್ಬಂದಿ ನೇಮಕಾತಿ ನಡೆಯುತ್ತಿದೆ. ಸದ್ಯದಲ್ಲಿಯೇ 22 ಸಾವಿರ ಸಿಬ್ಬಂದಿ ನೇಮಕಾತಿಗೆ ಮತ್ತೆ ಅಧಿಸೂಚನೆ ಹೊರಬೀಳಲಿದ್ದು ಒಟ್ಟಾರೆ ಹೊಸ ಆದೇಶದಿಂದ ಸಿಐಎಸ್‌ಎಫ್‌ನಲ್ಲಿ 58 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ.

ಈ ಹೊಸ ಕ್ರಾಂತಿಕಾರಿ ನಿರ್ಧಾರದಿಂದ ದೇಶದ ಕೈಗಾರಿಕಾ ಭದ್ರತೆ ಜೊತೆ ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಸಿಐಎಸ್‌ಎಫ್ ಗಣನೀಯ ಕೊಡುಗೆ ನೀಡಿದಂತಾಗುತ್ತದೆ ಎಂದು ಸಿಐಎಸ್‌ಎಫ್ ಟ್ವೀಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.