ಚಂಡಿಗಡ: ಪಂಜಾಬ್‌ನಲ್ಲಿ ಇತ್ತೀಚೆಗೆ ನಡೆದ ಐದು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ (ಆಮ್ ಆದ್ಮಿ ಪಾರ್ಟಿ) ಪಟಿಯಾಲದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದು ಉಳಿದ 4 ಮಹಾನಗರ ಪಾಲಿಕೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ.
ಇತ್ತೀಚೆಗೆ ಪಟಿಯಾಲ, ಲೂಧಿಯಾನಾ, ಜಲಂಧರ್, ಅಮೃತಸರ, ಫಗ್ವಾರಾದ ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿದತ್ತು.
ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಎಎಪಿ ಪಟಿಯಾಲದಲ್ಲಿ ಗೆಲುವು ದಾಖಲಿಸಿದೆ. ಲೂಧಿಯಾನ ಮತ್ತು ಜಲಂಧರ್‌ನಲ್ಲಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಅಮೃತಸರ ಮತ್ತು ಫಗ್ವಾರಾದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿದೆ.
ಪಟಿಯಾಲಾದ 53 ವಾರ್ಡ್‌ಗಳ ಪೈಕಿ ಎಎಪಿ 43ರಲ್ಲಿ ಭರ್ಜರಿ ಗೆಲುವು ದಾಖಲಿಸಿ ಅಧಿಕಾರದ ಗದ್ದುಗೆ ಹಿಡಿದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ತಲಾ 4 ಸ್ಥಾನಗಳನ್ನು ಪಡೆದಿವೆ. ಶಿರೋಮಣಿ ಅಕಾಲಿದಳ ಎರಡು ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ. ಎಎಪಿ ಮೇಯರ್ ಆಯ್ಕೆಗಾಗಿ ಸಿದ್ಧತೆಯಲ್ಲಿ ತೊಡಗಿದೆ.
ಲೂಧಿಯಾನಾದ 95 ವಾರ್ಡ್‌ಗಳ ಪೈಕಿ 42ರಲ್ಲಿ ಎಎಪಿ ಗೆಲುವು ದಾಖಲಿಸಿದೆ. ಕಾಂಗ್ರೆಸ್ 29, ಬಿಜೆಪಿ 19, ಪಕ್ಷೇತರರು 3 ಮತ್ತು ಎಸ್‌ಎಡಿ 2 ವಾರ್ಡ್‌ಗಳಲ್ಲಿ ಗೆದ್ದಿದ್ದಾರೆ. ಇಲ್ಲಿ ಎಎಪಿ ಅತಿ ದೊಡ್ಡ ಪಕ್ಷವಾಗಿದೆ.
ಜಲಂಧರ್ ಪಾಲಿಕೆಯ 85 ವಾರ್ಡ್‌ಗಳಲ್ಲಿ ಎಎಪಿ 39ರಲ್ಲಿ ಗೆಲುವು ಸಾಧಿಸಿದೆ, ಕಾಂಗ್ರೆಸ್ 24 ಮತ್ತು ಬಿಜೆಪಿ 19 ವಾರ್ಡ್‌ಗಳಲ್ಲಿ ಗೆದ್ದಿದೆ. ಇಲ್ಲಿ ಕೂಡ ಎಎಪಿ ಅತಿ ದೊಡ್ಡ ಪಕ್ಷವಾಗಿದೆ.
ಅಮೃತಸರದ 85 ವಾರ್ಡ್‌ಗಳಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ಗೆದ್ದುಕೊಂಡಿದೆ. ಎಎಪಿ 28 ಮತ್ತು ಬಿಜೆಪಿ 10 ವಾರ್ಡ್‌ಗಳಲ್ಲಿ ಗೆದ್ದಿವೆ. ಇತರರು 7 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.
ಫಗ್ವಾರಾದ ಮಹಾನಗರ ಪಾಲಿಕೆಯಲ್ಲಿ 50 ವಾರ್ಡ್‌ಗಳಿವೆ. ಈ ಪೈಕಿ ಕಾಂಗ್ರೆಸ್ 22 ವಾರ್ಡ್‌ಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎಎಪಿ 12, ಬಿಜೆಪಿ 4, ಎಸ್‌ಎಡಿ 3, ಬಿಎಸ್‌ಪಿ ಮೂರು ವಾರ್ಡ್‌ಗಳಲ್ಲಿ ಗೆದ್ದಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.