ADVERTISEMENT

MPPSC ಪರೀಕ್ಷೆಗೆ ಸಿದ್ಧತೆ: ತರಗತಿಯಲ್ಲೇ ಕುಸಿದು ಬಿದ್ದ ವಿದ್ಯಾರ್ಥಿ ಸಾವು

ಪಿಟಿಐ
Published 18 ಜನವರಿ 2024, 13:28 IST
Last Updated 18 ಜನವರಿ 2024, 13:28 IST
   

ಇಂದೋರ್‌: ಮಧ್ಯಪ್ರದೇಶದ ನಾಗರಿಕ ಸೇವಾ ಆಯೋಗ ನಡೆಸುವ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ತರಬೇತಿ ಕೇಂದ್ರದಲ್ಲಿ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ರಾಜಾ ಲೋಧಿ (20) ಮೃತ ವಿದ್ಯಾರ್ಥಿ. ಇವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಕುಸಿದು ಬಿದ್ದ ತಕ್ಷಣವೇ ರಾಜಾ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ನಡೆಯುತ್ತಿರುವಾಗಲೇ ಅವರು ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಉಪ ಪೊಲೀಸ್‌ ಆಯುಕ್ತ ಅಭಿನಯ್‌ ವಿಶ್ವಕರ್ಮ ಹೇಳಿದ್ದಾರೆ.

ADVERTISEMENT

ತರಗತಿಯ ಮಧ್ಯೆ ರಾಜಾ ಅವರು ಪ್ರಜ್ಞೆ ತಪ್ಪಿ ಬೀಳುತ್ತಿರುವ ದೃಶ್ಯ ತರಬೇತಿ ಕೇಂದ್ರದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ರಾಜಾ ಅವರನ್ನು ಆಸ್ಪತ್ರೆಗೆ ಕರೆತಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಜೀವರಕ್ಷಗಳನ್ನು ನೀಡಿ ಸುಮಾರು 40 ರಿಂದ 45 ನಿಮಿಷಗಳವರೆಗೆ ಎಚ್ಚರ ಮಾಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ತಿಳಿದುಬರಲಿದೆ’ ಎಂದು ರಾಜಾ ಅವರಿಗೆ ಚಿಕಿತ್ಸೆ ನೀಡಿದ ಹೃದ್ರೋಗ ತಜ್ಞ ಮಹೇಂದ್ರ ಚೌರಾಸಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.