
ಭೂತಾನ್‌ನ ಪ್ರಧಾನಿ ಶೆರಿಂಗ್ ಟೊಬಗೆ ಅವರನ್ನು ಭಾರತದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಭೇಟಿಯಾಗಿ ಚರ್ಚಿಸಿದರು ಪಿಟಿಐ ಚಿತ್ರ
ನವದೆಹಲಿ: ಉಭಯ ರಾಷ್ಟ್ರಗಳ ನ್ಯಾಯಾಂಗದ ನಡುವಿನ ಸಹಕಾರ ಹೆಚ್ಚಿಸುವ ಕುರಿತಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಭೂತಾನ್‌ನ ರಾಜ ಜಿಗ್ಮೆ ಖೇಸರ್ ನಮ್‌ಗ್ಯಾಲ್ ವಾಂಗ್ಚುಕ್ ಹಾಗೂ ಪ್ರಧಾನಿ ಶೆರಿಂಗ್ ಟೊಬಗೆ ಅವರೊಂದಿಗೆ ಶನಿವಾರ ಸಭೆ ನಡೆಸಿದರು.
ಭಾರತ–ಭೂತಾನ್ ನಡುವಿನ ಸಂಬಂಧವನ್ನು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದ ಗವಾಯಿ, ‘ತಂತ್ರಜ್ಞಾನ ಸಂಯೋಜನೆ, ಸಾಮರ್ಥ್ಯವರ್ಧನೆ ಮತ್ತು ಜ್ಞಾನ ವಿನಿಮಯಕ್ಕೆ ಸಂಬಂಧಿಸಿದಂತೆ ಭೂತಾನ್‌ನ ನ್ಯಾಯಾಂಗ ಬೆಂಬಲಿಸಲು ಭಾರತೀಯ ನ್ಯಾಯಾಂಗವು ಅಣಿಯಾಗಿದೆ’ ಎಂದು ಹೇಳಿದರು.
ಜೆಎಸ್‌ಡಬ್ಲ್ಯು ಸ್ಕೂಲ್ ಆಫ್ ಲಾ ವಿದ್ಯಾರ್ಥಿಗಳೊಂದಿಗೆ ಗವಾಯಿ ಸಂವಾದ ನಡೆಸಿದರು. ರಾಜಕುಮಾರಿ ಸೋನಮ್ ಡೆಚೆನ್ ವಾಂಗ್ಚುಕ್ ಹಾಗೂ ಭೂತಾನ್‌ನ ಮುಖ್ಯ ನ್ಯಾಯಮೂರ್ತಿ ನೊರ್ಬು ಶೆರಿಂಗ್ ಭಾಗಿಯಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.