ADVERTISEMENT

ಚಂದ್ರನ ಮತ್ತಷ್ಟು ಸನಿಹಕ್ಕೆ ‘ಚಂದ್ರಯಾನ–2’: ಆರ್ಬಿಟರ್‌ನಿಂದ ಬೇರ್ಪಟ್ಟ ಲ್ಯಾಂಡರ್

ಏಜೆನ್ಸೀಸ್
Published 2 ಸೆಪ್ಟೆಂಬರ್ 2019, 10:02 IST
Last Updated 2 ಸೆಪ್ಟೆಂಬರ್ 2019, 10:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:‘ಚಂದ್ರಯಾನ–2’ಯೋಜನೆ ಬಹುತೇಕ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದು, ಆರ್ಬಿಟರ್ ಮತ್ತು ಲ್ಯಾಂಡರ್ ಬೇರ್ಪಡುವ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿದೆ.

‘ಚಂದ್ರಯಾನ–2’ ಆರ್ಬಿಟರ್‌ನಿಂದ ‘ವಿಕ್ರಂ’ ಲ್ಯಾಂಡರ್ ಸೋಮವಾರ ಮಧ್ಯಾಹ್ನ ಯಶಸ್ವಿಯಾಗಿ ಬೇರ್ಪಟ್ಟಿದೆ. ಇದು ಸೆಪ್ಟೆಂಬರ್ 7ರಂದು ರಾತ್ರಿ ಚಂದ್ರನ ಮೇಲ್ಮೈ ಸ್ಪರ್ಶಿಸಲಿದೆ.‘ವಿಕ್ರಂ’ ಲ್ಯಾಂಡರ್ಚಂದ್ರನ ಮೇಲೆ ಇಳಿದ ನಂತರ ಅದರಿಂದ ಬೇರೆಯಾಗಲಿರುವ ‘ಪ್ರಜ್ಞಾನ್’ ರೋವರ್ ಚಂದ್ರನ ಮಣ್ಣಿನ ಬಗ್ಗೆ ಸಂಶೋಧನೆ ನಡೆಸಲಿದೆ’ ಎಂದು ಇಸ್ರೋ ತಿಳಿಸಿದೆ.

ಸೆಪ್ಟೆಂಬರ್ 7ರಂದು ಚಂದ್ರನ ಮೇಲೆ ಚಂದ್ರಯಾನ–2 ನೌಕೆ ಇಳಿಯುವ ಕೊನೆಯ 15 ನಿಮಿಷಗಳು ರೋಚಕವಾಗಿರಲಿವೆ ಎಂದು ಇಸ್ರೊ ವಿಜ್ಞಾನಿಗಳು ಈಗಾಗಲೇ ತಿಳಿಸಿದ್ದಾರೆ.ಸುರಕ್ಷಿತವಾಗಿ ನೌಕೆ ಇಳಿಸುವುದು ಹಾಗೂ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವುದು; ಈ ಎರಡೂ ಇಸ್ರೊ ಪಾಲಿಗೆ ಮೊದಲ ಯತ್ನಗಳು. ಹೀಗಾಗಿ ನೌಕೆ ಇಳಿಯುವ ಕೊನೆಯ ಕ್ಷಣಗಳ ಬಗ್ಗೆ ಇಸ್ರೊ ವಿಜ್ಞಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ.

ಚಂದ್ರಯಾನ–2ರ ನೌಕೆಯನ್ನು ಹೊತ್ತ ರಾಕೆಟ್ ‘ಬಾಹುಬಲಿ’ ಜುಲೈ 22ರಂದು ಮಧ್ಯಾಹ್ನ 2.45ಕ್ಕೆ ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಹಾರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.