ADVERTISEMENT

ತೇವಾಂಶ ಕುಸಿತ; ಯಶಸ್ವಿಯಾಗದ ಮೋಡ ಬಿತ್ತನೆ: ಕಾನ್ಪುರದ IIT ನಿರ್ದೇಶಕ ಅಗರವಾಲ್‌

ಪಿಟಿಐ
Published 29 ಅಕ್ಟೋಬರ್ 2025, 15:50 IST
Last Updated 29 ಅಕ್ಟೋಬರ್ 2025, 15:50 IST
<div class="paragraphs"><p>ಮೋಡ ಬಿತ್ತನೆ ವಿಮಾನ</p></div>

ಮೋಡ ಬಿತ್ತನೆ ವಿಮಾನ

   

ನವದೆಹಲಿ: ಚಳಿಗಾಲದಲ್ಲಿ ಉಂಟಾಗುವ ವಾಯುಮಾಲಿನ್ಯ ತಗ್ಗಿಸುವುದಕ್ಕಾಗಿ ದೆಹಲಿ ಸರ್ಕಾರವು, ಐಐಟಿ – ಕಾನ್ಪುರದ ಸಹಯೋಗದೊಂದಿಗೆ ಮಂಗಳವಾರ ನಗರದ ವಿವಿಧೆಡೆ ಕೈಗೊಂಡ ಮೋಡಬಿತ್ತನೆ ಕಾರ್ಯ ಫಲಪ್ರದವಾಗಿಲ್ಲ.

‘ಮೋಡಗಳಲ್ಲಿ ತೇವಾಂಶ ಕಡಿಮೆ ಇದ್ದ ಕಾರಣ, ಮೋಡಬಿತ್ತನೆ ಪ್ರಯೋಗದ ನಂತರವೂ ಮಳೆ ಬಂದಿಲ್ಲ. ಆದರೆ, ಈ ಪ್ರಯೋಗ ಉಪಯುಕ್ತ ಮಾಹಿತಿಯನ್ನು ಒದಗಿಸಿದೆ’ ಎಂದು ಕಾನ್ಪುರ ಐಐಟಿ ನಿರ್ದೇಶಕ ಮಣೀಂದ್ರ ಅಗರ್ವಾಲ್ ಹೇಳಿದ್ದಾರೆ.

ADVERTISEMENT

ಈ ಕುರಿತು ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಾತಾವರಣದಲ್ಲಿ ಕೇವಲ ಶೇ 15 ರಷ್ಟು ತೇವಾಂಶವಿತ್ತು. ಇಷ್ಟು ಕಡಿಮೆ ತೇವಾಂಶದೊಂದಿಗೆ ಮಳೆಯಾಗುವ ಸಾಧ್ಯತೆ ತುಂಬಾ ಕಡಿಮೆ. ಹೀಗಾಗಿ ಯಶಸ್ಸು ದೊರೆತಿಲ್ಲ’ ಎಂದು ಅವರು ವಿವರಿಸಿದ್ದಾರೆ.

‘300 ಚದರ ಕಿ.ಮೀ ಪ್ರದೇಶದಲ್ಲಿ ಮೋಡ ಬಿತ್ತನೆ ಪ್ರಯೋಗ ನಡೆಸಲಾಯಿತು. ಇದರ ವೆಚ್ಚ ಅಂದಾಜು ₹60 ಲಕ್ಷ. ಅಂದರೆ ಪ್ರತಿ ಚದರ ಕಿ.ಮೀಗೆ ₹20 ಸಾವಿರ. ನಾವು ಒಂದು ಸಾವಿರ ಚದರ ಕಿ.ಮೀ ಪ್ರದೇಶದಲ್ಲಿ ಈ ಪ್ರಯೋಗವನ್ನು ನಡೆಸಿದರೆ, ಸುಮಾರು ₹2 ಕೋಟಿ ವೆಚ್ವಾಗಬಹುದು’ ಎಂದು ತಿಳಿಸಿದ್ದಾರೆ.

‘ನಗರದಲ್ಲಿ ಉಂಟಾಗುವ ಮಾಲಿನ್ಯ ನಿಯಂತ್ರಣಕ್ಕಾಗಿ ಕೈಗೊಳ್ಳುವ ಕ್ರಮಗಳಿಗೆ ಮಾಡುವ ಖರ್ಚಿಗೆ ಹೋಲಿಸಿದರೆ, ಮೋಡ ಬಿತ್ತನೆಗೆ ಮಾಡುತ್ತಿರುವ ವೆಚ್ಚ ದೊಡ್ಡದಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಸರ್ಕಾರ, ಐಐಟಿ ವಿಜ್ಞಾನಿಗಳ ಸಹಯೋಗದಲ್ಲಿ ದೆಹಲಿಯ ಬುರಾರಿ, ಉತ್ತರ ಕರೋಲ್ ಬಾಘ್ ಮತ್ತು ಮಯೂರು ವಿಹಾರ್ ಪ್ರದೇಶಗಳಲ್ಲಿ ಎರಡು ಬಾರಿ ಮೋಡಬಿತ್ತನೆ ಪ್ರಯೋಗ ನಡೆಸಿತ್ತು. ಆದರೆ, ಮಳೆಯಾಗಲಿಲ್ಲ. ಈ ಪ್ರಯೋಗಗಳ ನಂತರ ನೋಯ್ಡಾ ಮತ್ತು ಗ್ರೇಟರ್‌ ನೋಯ್ಡಾದಲ್ಲಿ ತುಂತುರು ಮಳೆಯಾದ ವರದಿಯಾಗಿದೆ.

ಮೋಡಗಳಲ್ಲಿ ಸಾಕಷ್ಟು ತೇವಾಂಶವಿಲ್ಲದ ಕಾರಣ ದೆಹಲಿಯಲ್ಲಿ ಬುಧವಾರ ನಿಗದಿಯಾಗಿದ್ದ ಮೋಡ ಬಿತ್ತನೆ ಪ್ರಯೋಗವನ್ನು ಸ್ಥಗಿತಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.