ADVERTISEMENT

ಕಾಂಗ್ರೆಸ್‌ ಪ್ರದೇಶ ಚುನಾವಣಾ ಸಮಿತಿಗೆ 11 ಹೊಸ ನಾಯಕರ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 11:10 IST
Last Updated 19 ಡಿಸೆಂಬರ್ 2022, 11:10 IST
   

ನವದೆಹಲಿ: ಕರ್ನಾಟಕ ಪ್ರದೇಶ ಚುನಾವಣಾ ಸಮಿತಿಗೆ ಕಾಂಗ್ರೆಸ್‌ನ 11 ಹೊಸ ನಾಯಕರ ಹೆಸರನ್ನುಸೋಮವಾರ ಪ್ರಕಟಿಸಲಾಗಿದ್ದು, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳುವ ಸರ್ವ ‍ಪ್ರಯತ್ನ ಆರಂಭವಾಗಿದೆ.

‘2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಪ್ರದೇಶ ಚುನಾವಣಾ ಸಮಿತಿಯಲ್ಲಿ ಹೆಚ್ಚುವರಿ ಹೆಸರುಗಳನ್ನು ಸೇರಿಸುವುದಕ್ಕೆ ಕಾಂಗ್ರೆಸ್ ಅಧ್ಯಕ್ಷರು ಅನುಮೋದಿಸಿದ್ದು, ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ’ ಎಂದು ಪಕ್ಷದ ಮೂಲ ತಿಳಿಸಿದೆ.

ಪ್ರದೇಶ ಚುನಾವಣಾ ಸಮಿತಿಯಲ್ಲಿ ಬಿ.ಎಲ್.ಶಂಕರ್, ಪರಮೇಶ್ವರ್ ನಾಯ್ಕ, ಉಮಾಶ್ರೀ, ರಮೇಶ್ ಕುಮಾರ್, ರಮಾನಾಥ್ ರೈ, ಎಚ್‌.ಎಂ.ರೇವಣ್ಣ, ಎಎಂ ಹಿಂಡಸಗೇರಿ ಹೆಸರು ಜತೆಗೆ ರಾಜ್ಯ ಕಾಂಗ್ರೆಸ್ ಮುಖಂಡರಾದ ಜಮೀರ್ ಅಹಮದ್, ಶಿವಾನಂದ ಪಾಟೀಲ, ಶರಣಬಸಪ್ಪಗೌಡ ದರ್ಶನಾಪುರ, ಶರಣಪ್ರಕಾಶ್‌ ಪಾಟೀಲ ಅವರನ್ನೂ ಸಮಿತಿಗೆ ಸೇರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.