ADVERTISEMENT

ಸಂಸತ್ತಿನ ಸ್ಥಾಯಿ ಸಮಿತಿಗಳನ್ನು ನಿಯಂತ್ರಿಸಲು ಬಿಜೆಪಿ ಯತ್ನ: ಜೈರಾಮ್ ರಮೇಶ್

ಪಿಟಿಐ
Published 30 ಜನವರಿ 2025, 10:57 IST
Last Updated 30 ಜನವರಿ 2025, 10:57 IST
ಜೈರಾಮ್ ರಮೇಶ್  
ಜೈರಾಮ್ ರಮೇಶ್     

ನವದೆಹಲಿ: ಸಂಸತ್ತಿನ ಸ್ಥಾಯಿ ಸಮಿತಿಗಳನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ದೂರಿದೆ. ಬಿಜೆಪಿಯ 26 ಸಂಸದರು ಎರಡು ಸಮಿತಿಗಳ ಸದಸ್ಯರಾಗಿದ್ದು, ಇದು ಪರಂಪರಾಗತವಾಗಿ ಪಾಲಿಸಿಕೊಂಡು ಬಂದ ‘ಓರ್ವ ಸಂಸದ, ಒಂದು ಸ್ಥಾಯಿ ಸಮಿತಿ’ ನಿಯಮಕ್ಕೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

1990ರ ಮಧ್ಯದಲ್ಲಿ ಸ್ಥಾಯಿ ಸಮಿತಿಗಳನ್ನು ರಚಿಸಿದ ಬಳಿಕ ‘ಓರ್ವ ಸಂಸದ, ಒಂದು ಸ್ಥಾಯಿ ಸಮಿತಿ’ ಸಂಪ್ರದಾಯವನ್ನು ಪಾಲಿಸಲಾಗಿತ್ತು ಎಂದು ಕಾಂಗ್ರೆಸ್‌ನ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.

‘ಈಗ ಬಿಜೆಪಿಯ 26 ಸಂಸದರು 2 ಸ್ಥಾಯಿ ಸಮಿತಿಗಳ ಸದಸ್ಯರಾಗಿದ್ದಾರೆ. ಇದು ಸ್ಥಾಯಿ ಸಮಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಬಿಜೆಪಿಯ ಧೋರಣೆಯ ಪ್ರತೀಕ’ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಒಟ್ಟು 24 ಇಲಾಖಾವಾರು ಸ್ಥಾಯಿ ಸಮಿತಿಗಳಿದ್ದು, ಈ ಪೈಕಿ 11 ಸಮಿತಿಗೆ ಬಿಜೆಪಿ ಹಾಗೂ 4 ಸಮಿತಿಗೆ ಮಿತ್ರ ‍ಪಕ್ಷಗಳು ಸದಸ್ಯರು ಮುಖ್ಯಸ್ಥರಾಗಿದ್ದಾರೆ. 4 ಸಮಿತಿಗಳಿಗೆ ಕಾಂಗ್ರೆಸ್, ತಲಾ 2ಕ್ಕೆ ಟಿಎಂಸಿ ಹಾಗೂ ಡಿಎಂಕೆ, 1 ಸಮಿತಿಗೆ ಸಮಾಜವಾದಿ ಪಕ್ಷದ ಸಂಸದರು ಮುಖ್ಯಸ್ಥರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.