ADVERTISEMENT

ಕಾಂಗ್ರೆಸ್ ದುರ್ಬಲವಾಗಿದೆ, ಯುಪಿಎ ಬಲಪಡಿಸಲು ಒಗ್ಗಟ್ಟಾಗಬೇಕಿದೆ: ಸಂಜಯ್ ರಾವುತ್

ಏಜೆನ್ಸೀಸ್
Published 11 ಡಿಸೆಂಬರ್ 2020, 7:21 IST
Last Updated 11 ಡಿಸೆಂಬರ್ 2020, 7:21 IST
ಸಂಜಯ್ ರಾವುತ್ –ಎಎನ್‌ಐ ಚಿತ್ರ
ಸಂಜಯ್ ರಾವುತ್ –ಎಎನ್‌ಐ ಚಿತ್ರ   

ಮುಂಬೈ: ಯುಪಿಎಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ದುರ್ಬಲವಾಗಿದ್ದು, ಮೈತ್ರಿಕೂಟವನ್ನು ಬಲಪಡಿಸಲು ಪ್ರತಿಪಕ್ಷಗಳು ಒಗ್ಗಟ್ಟಾಗಬೇಕಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

‘ಎನ್‌ಸಿಪಿಯ ಶರದ್ ಪವಾರ್ ಅವರು ಯುಪಿಎಯ ಅಧ್ಯಕ್ಷರಾಗುವುದಾದರೆ ನಮಗೆ ಸಂತಸವಿದೆ. ಆದರೆ, ಅವರು ಅದನ್ನು ನಿರಾಕರಿಸಿದ್ದಾರೆಂದು ಕೇಳಿದ್ದೇನೆ. ಅವರು ಅಧ್ಯಕ್ಷರಾಗಬೇಕೆಂಬ ಅಧಿಕೃತ ಪ್ರಸ್ತಾವನೆ ಮಂಡನೆಯಾದರೆ ನಾವದನ್ನು ಬೆಂಬಲಿಸುತ್ತೇವೆ. ಕಾಂಗ್ರೆಸ್ ದುರ್ಬಲವಾಗಿದೆ. ಹೀಗಾಗಿ ಪ್ರತಿಪಕ್ಷಗಳು ಒಗ್ಗಟಾಗಬೇಕಾದ ಅವಶ್ಯಕತೆ ಇದೆ’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ದೊಡ್ಡ ಪಕ್ಷವಾಗಿದ್ದು, ಇಂಥ ವಿಚಾರಗಳು ದೊಡ್ಡದಾಗಿರುವುದರಿಂದ ಆ ಪಕ್ಷದವರೇ ನಿರ್ಧಾರ ಕೈಗೊಳ್ಳಬೇಕು. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ರಚನೆಯಾಗಿರುವಂತೆಯೇ ರಾಷ್ಟ್ರಮಟ್ಟದಲ್ಲಿಯೂ ಅಂತಹ ಮೈತ್ರಿ ರಚನೆಯಾಗಬೇಕು ಎಂದೂ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.