ADVERTISEMENT

ಯುರೋಪ್‌ಗೆ ತೆರಳಿದ ರಾಹುಲ್‌ ಗಾಂಧಿ

ಪಿಟಿಐ
Published 6 ಸೆಪ್ಟೆಂಬರ್ 2023, 2:30 IST
Last Updated 6 ಸೆಪ್ಟೆಂಬರ್ 2023, 2:30 IST
<div class="paragraphs"><p> ರಾಹುಲ್‌ ಗಾಂಧಿ</p></div>

ರಾಹುಲ್‌ ಗಾಂಧಿ

   

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಂಗಳವಾರ ಒಂದು ವಾರದ ಯುರೋಪ್‌ ಪ್ರವಾಸ ಆರಂಭಿಸಿದ್ದಾರೆ.

ಭೇಟಿಯ ವೇಳೆ ಅವರು ಯುರೋಪ್‌ ಒಕ್ಕೂಟದ (European Union) ವಕೀಲರು, ವಿದ್ಯಾರ್ಥಿಗಳು ಮತ್ತು ಯುರೋಪ್‌ನಲ್ಲಿ ನೆಲೆಸಿದ ಭಾರತೀಯರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ADVERTISEMENT

ಸೆ.7ರಂದು ಬ್ರಸೆಲ್ಸ್‌ ಮತ್ತು ಹೇಗ್‌ನಲ್ಲಿ ಯುರೋಪ್‌ ಯುನಿಯನ್‌ ವಕೀಲರನ್ನು  ಭೇಟಿಯಾಗಲಿದ್ದಾರೆ.

ಸೆ.8 ರಂದು ಪ್ಯಾರಿಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಾಹುಲ್‌ ಮಾತನಾಡಲಿದ್ದಾರೆ. 

ಸೆ. 9 ರಂದು ಪ್ಯಾರಿಸ್‌ನಲ್ಲಿ ಫ್ರಾನ್ಸ್‌ನ ಲೇಬರ್ ಯೂನಿಯನ್‌ನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಅವರು ನಾರ್ವೆಗೆ ಭೇಟಿ ನೀಡಲಿದ್ದು, ಸೆ.10 ರಂದು ಓಸ್ಲೋದಲ್ಲಿ ಭಾರತ ಮೂಲದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. 

ಸೆ.11ರಂದು ಜಿ–20 ಸಭೆ ಮುಗಿದ ಮೇಲೆ‌ ರಾಹುಲ್‌ ಗಾಂಧಿ ಅವರು ಭಾರತಕ್ಕೆ ವಾಪಸ್ಸಾಗುವ ನಿರೀಕ್ಷೆಯಿದೆ.

ಜಿ20 ನಾಯಕರ ಶೃಂಗಸಭೆ ಸೆ. 9-10ರವರೆಗೆ ದೆಹಲಿಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.