ADVERTISEMENT

‘ಮಗನ ವಿರುದ್ಧ ನಿಮ್ಮ ಪುತ್ರನನ್ನು ಕಣಕ್ಕಿಳಿಸಬೇಡಿ’ ಕಮಲ ಸಂಸದನಿಗೆ ಕೈ ನಾಯಕ ಮನವಿ

ಚುನಾವಣೆ ರಣತಂತ್ರ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 10:12 IST
Last Updated 28 ಮಾರ್ಚ್ 2019, 10:12 IST
ಬಿಜೆಪಿ ಸಂಸದ ದಿಲೀಪ್‌ ಗಾಂಧಿ ಅವರ ಕಚೇರಿಯಲ್ಲಿ ಸಭೆ ನಡೆಯಿತು.        –ಎಎನ್‌ಐ ಚಿತ್ರ
ಬಿಜೆಪಿ ಸಂಸದ ದಿಲೀಪ್‌ ಗಾಂಧಿ ಅವರ ಕಚೇರಿಯಲ್ಲಿ ಸಭೆ ನಡೆಯಿತು. –ಎಎನ್‌ಐ ಚಿತ್ರ   

ಮುಂಬೈ: ಅಹ್ಮದ್‌ನಗರ ಲೋಕಸಭೆ ಕ್ಷೇತ್ರದಿಂದ ತಮ್ಮ ಮಕ್ಕಳು ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್‌ ಹಾಗೂ ಬಿಜೆಪಿ ಸಂಸದ ದಿಲೀಪ್‌ ಗಾಂಧಿ ಗುರುವಾರ ಮಾತುಕತೆ ನಡೆಸಿದ್ದಾರೆ.

ಸಭೆ ನಡೆದ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆ ಜೊತೆ ದೂರವಾಣಿ ಮೂಲಕ ಮಾತನಾಡಿದ ದಿಲೀಪ್‌ ಸಿಂಗ್‌ ಅವರು, ‘ಈ ಕ್ಷೇತ್ರದಿಂದ ನನ್ನ ಮಗ ಹಾಗೂ ಅವರ ಮಗ ಸ್ಪರ್ಧೆ ನಡೆಸಲಿರುವ ಸಂಬಂಧ ಮಾತುಕತೆ ನಡೆಸಿದ್ದೇವೆ. ಅವರು(ರಾಧಾಕೃಷ್ಣ ವಿಖೆ ಪಾಟೀಲ್‌) ತಮ್ಮ ಮಗನ ವಿರುದ್ಧ ನನ್ನ ಮಗನನ್ನು ಕಣಕ್ಕಿಳಿಸದಂತೆ ಮನವಿ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ನಾನು ಯಾವುದೇ ಭರವಸೆ ನೀಡಿಲ್ಲ. ತೀರ್ಮಾನ ತೆಗೆದುಕೊಳ್ಳುವುದಕ್ಕೆ ಸಮಯಾವಕಾಶ ಬೇಕಿದೆ’ ಎಂದು ತಿಳಿಸಿದ್ದಾರೆ.

ಹಿರಿಯ ನಾಯಕ ಪಾಟಿಲ್‌ ಅವರ ಮಗಸುಜಯ್ ವಿಖೆ ಪಾಟೀಲ್‌ ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅವರಿಗೆ ಅಹ್ಮದ್‌ನಗರ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಈ ಕ್ಷೇತ್ರದಿಂದ ಮೂರು ಬಾರಿ ಗೆದ್ದಿರುವ ಮತ್ತುಹಾಲಿ ಸಂಸದರೂ ಆಗಿರುವ ದಿಲೀಪ್‌ ಗಾಂಧಿ ಅವರಿಗೆ ಮತ್ತೊಮ್ಮೆ ಟಿಕೆಟ್‌ ನೀಡಲುಬಿಜೆಪಿ ನಿರಾಕರಿಸಿತ್ತು. ಹೀಗಾಗಿ ಅವರ ಪುತ್ರ ಸುವೇಂದ್ರ ಇದೇ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ.

ADVERTISEMENT

ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆಯು ಏಪ್ರಿಲ್‌ 11,18, 23 ಹಾಗೂ 29ರಂದುನಾಲ್ಕು ಹಂತಗಳಲ್ಲಿ ನಡೆಯಲಿದೆ. ಫಲಿತಾಂಶವು ಮೇ 23ರಂದು ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.