ADVERTISEMENT

ಎರಡು ರಾಜ್ಯ ಕಳೆದುಕೊಂಡ ಕಾಂಗ್ರೆಸ್‌: ಡಿ.6ರಂದು ‘ಇಂಡಿಯಾ’ ಸಭೆ ಕರೆದ ಖರ್ಗೆ

ಪ್ರಜಾವಾಣಿ ವಿಶೇಷ
Published 3 ಡಿಸೆಂಬರ್ 2023, 13:36 IST
Last Updated 3 ಡಿಸೆಂಬರ್ 2023, 13:36 IST

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಿಸೆಂಬರ್ 6ರಂದು ‘ಇಂಡಿಯಾ’ ಬಣದ ನಾಯಕರ ಸಭೆ ಕರೆದಿದ್ದಾರೆ. ಅವರ ಮನೆಯಲ್ಲಿ ಸಭೆ ನಡೆಯಲಿದ್ದು,ಬದಲಾದ ಸನ್ನಿವೇಶದಲ್ಲಿ ಮುಂದಿನ ಲೋಕಸಭೆ ಚುನಾವಣೆಗೆ ರಣತಂತ್ರ ರೂಪಿಸಲು ಇಂಡಿಯಾ ಬಣದ ನಾಯಕರು ನಿರ್ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂಡಿಯಾ ಬಣದ ನಾಯಕರು ದೇಶದ ವಿವಿಧೆಡೆ ಜಂಟಿ ರ್‍ಯಾಲಿಗೆ ಸಿದ್ಧತೆ ನಡೆಸಿದ್ದರು. ಬಣದ ನೇತೃತ್ವ ವಹಿಸಿರುವ ಕಾಂಗ್ರೆಸ್‌ ಪಕ್ಷವೇ, ಈಗ ಮತ್ತೆರಡು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಪರಿಣಾಮ, ಈ ಯೋಜನೆಗೆ ತಾತ್ಕಾಲಿಕ ಬ್ರೇಕ್‌ ಬೀಳಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ, ಸೀಟು ಹಂಚಿಕೆ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ, ದಿನದ ಪ್ರಮುಖ ವಿದ್ಯಮಾನಗಳು ಈ ವಿಡಿಯೊದಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.