ADVERTISEMENT

ಬೆಲೆ ಏರಿಕೆ ಬಗ್ಗೆ ವಿಮಾನದಲ್ಲಿ ಸಚಿವೆ ಸ್ಮೃತಿ ಇರಾನಿಗೆ ತರಾಟೆ: ವಿಡಿಯೊ ವೈರಲ್‌

ಪಿಟಿಐ
Published 11 ಏಪ್ರಿಲ್ 2022, 1:54 IST
Last Updated 11 ಏಪ್ರಿಲ್ 2022, 1:54 IST
ಸಚಿವೆ ಸ್ಮೃತಿ ಇರಾನಿಗೆ ಸಹ ಪ್ರಯಾಣಿಕರೊಬ್ಬರು ವಿಮಾನದಲ್ಲಿ ಪ್ರಶ್ನೆ ಮಾಡುತ್ತಿರುವುದು
ಸಚಿವೆ ಸ್ಮೃತಿ ಇರಾನಿಗೆ ಸಹ ಪ್ರಯಾಣಿಕರೊಬ್ಬರು ವಿಮಾನದಲ್ಲಿ ಪ್ರಶ್ನೆ ಮಾಡುತ್ತಿರುವುದು    

ನವದೆಹಲಿ: ಕಾಂಗ್ರೆಸ್‌ ಮಹಿಳಾ ಘಟಕದ ಹಂಗಾಮಿ ಅಧ್ಯಕ್ಷೆ ನೆಟ್ಟಾ ಡಿಸೋಜಾ ಅವರು ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರನ್ನು ಇಂಡಿಗೊ ವಿಮಾನದಲ್ಲಿ ಭಾನುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ದೆಹಲಿ– ಗುವಾಹಟಿ ವಿಮಾನದಲ್ಲಿ ಇಳಿಯುತ್ತಿದ್ದ ಸಂದರ್ಭದಲ್ಲಿ ನೆಟ್ಟಾ ಡಿಸೋಜಾ ಮತ್ತು ಸ್ಮೃತಿ ಇರಾನಿ ಮುಖಾ ಮುಖಿಯಾಗಿದ್ದರು. ಈ ವೇಳೆ ಅಡುಗೆ ಅನಿಲ ಮತ್ತು ಪೆಟ್ರೋಲ್‌ ಬೆಲೆ ಏರಿಕೆ ಕುರಿತು ಪ್ರಶ್ನಿಸುತ್ತಿರುವ ವಿಡಿಯೊವನ್ನು ನೆಟ್ಟಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಮಾನದಿಂದ ಇಳಿಯುವ ಪ್ರಯಾಣಿಕರಿಗೆ ಅಡ್ಡ ನಿಲ್ಲಬೇಡಿ ಎಂದು ಸಚಿವೆ, ನೆಟ್ಟಾ ಡಿಸೋಜಾ ಅವರಿಗೆ ಹೇಳಿರುವುದೂ ವಿಡಿಯೊದಲ್ಲಿ ದಾಖಲಾಗಿದೆ. ಕಳೆದ 27 ತಿಂಗಳುಗಳಿಂದ ದೇಶದ 80 ಕೋಟಿ ಜನರು ಉಚಿತವಾಗಿ ಆಹಾರಧಾನ್ಯಗಳನ್ನು ಪಡೆಯುತ್ತಿದ್ದಾರೆ ಎಂದೂ ಸ್ಮೃತಿ ಅವರು ಉತ್ತರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.