ADVERTISEMENT

ಋಷಿಕೇಷ | ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರಿಗೆ ಅವಕಾಶ

ಪಿಟಿಐ
Published 13 ಜೂನ್ 2020, 14:24 IST
Last Updated 13 ಜೂನ್ 2020, 14:24 IST
ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನದಲ್ಲಿ ಸೆರೆ ಹಿಡಿದ ಆನೆಗಳ ದೃಶ್ಯ –ಪ್ರಜಾವಾಣಿ ಚಿತ್ರ/ ಡಿ.ಜಿ.ಮಲ್ಲಿಕಾರ್ಜುನ
ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನದಲ್ಲಿ ಸೆರೆ ಹಿಡಿದ ಆನೆಗಳ ದೃಶ್ಯ –ಪ್ರಜಾವಾಣಿ ಚಿತ್ರ/ ಡಿ.ಜಿ.ಮಲ್ಲಿಕಾರ್ಜುನ   

ಹೃಷಿಕೇಷ: ಲಾಕ್‌ಡೌನ್‌ನಿಂದಾಗಿ ಎರಡೂವರೆ ತಿಂಗಳ ನಂತರ ಪ್ರಸಿದ್ಧ ಜಿಮ್‌ ಕಾರ್ಬೆಟ್‌‌ ರಾಷ್ಟ್ರೀಯ ಉದ್ಯಾನದ ಬಿಜ್ರಾನಿ, ಧೇಲಾ, ಜಿರ್ನಾ ವಲಯಗಳನ್ನು ಶನಿವಾರ ಪ್ರವಾಸಿಗರಿಗಾಗಿ ತೆರೆಯಲಾಯಿತು.

ಮಳೆಗಾಲದ ಕಾರಣಕ್ಕೆ ಜೂನ್‌ 15ರಿಂದಲೇ ಧಿಕಲಾ ವಲಯವನ್ನು ಮುಚ್ಚಲಾಗಿತ್ತು. ಮೊದಲು ಸಫಾರಿಗೆ ಆರು ಮಂದಿಗೆ ಅವಕಾಶವಿತ್ತು. ಈಗ ಇದರ ಸಂಖ್ಯೆಯನ್ನು ಚಾಲಕ ಹಾಗೂ ಮಾರ್ಗದರ್ಶಕ ಸೇರಿ ನಾಲ್ಕಕ್ಕೆ ಇಳಿಸಲಾಗಿದೆ. ಅಂತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಾರ್ಬೆಟ್‌ನ ಉಪ ನಿರ್ದೇಶಕ ಕಲ್ಯಾಣಿ ನೇಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT