ಮುಂಬೈ: ಕೊರೊನಾ ಸೋಂಕಿತರಿಗೆ ಸಂಪರ್ಕರಹಿತ ಔಷಧಿ ಮತ್ತು ಆಹಾರ ವಿತರಣೆ ಮಾಡಲು ಮಹಾರಾಷ್ಟ್ರದ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ರೋಬೋಟ್ ಅನ್ನು ವಿನ್ಯಾಸಗೊಳಿಸಿದ್ದಾನೆ.
ಸಾಯಿ ಸುರೇಶ್ ರಂಗ್ದಲ್ ಎನ್ನುವ ವಿದ್ಯಾರ್ಥಿ ವಿನ್ಯಾಸಗೊಳಿಸಿರುವ ರೋಬೋಟ್, ವಿಶೇಷವಾಗಿ ಕೊರೊನಾ ಸೋಂಕಿತರಿಗೆ ಔಷಧಿ ಮತ್ತು ಆಹಾರ ವಿತರಿಸಲು ಸಹಾಯವಾಗಲಿದೆ.
ಸಾಯಿ ಸುರೇಶ್ ಪ್ರಕಾರ, 'ರೋಬೋಟ್ ಅನ್ನು ಬ್ಯಾಟರಿಯಿಂದ ನಿರ್ವಹಿಸಬಹುದು ಮತ್ತು ಸ್ಮಾರ್ಟ್‌ಫೋನ್ ಮೂಲಕ ನಿಯಂತ್ರಿಸಬಹುದು. ಇದು 1 ಕೆಜಿ ತೂಕದ ವಸ್ತುಗಳನ್ನು ಸಾಗಿಸಬಲ್ಲದು'
ಕೊರೊನಾ ಸೋಂಕಿತರೊಂದಿಗೆ ವೈದ್ಯಕೀಯ ಸಿಬ್ಬಂದಿಯ ದೈಹಿಕ ಸಂಪರ್ಕವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ರೋಬೋಟ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸಾಯಿ ಸುರೇಶ್ ತಿಳಿಸಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.