ADVERTISEMENT

ಮೋದಿಜೀ ನಮ್ಮನ್ನು ರಕ್ಷಿಸಿ: ಜಪಾನ್ ಹಡಗಿನಿಂದ ಎಸ್‍ಒಎಸ್ ಸಂದೇಶ ಕಳಿಸಿದ ಭಾರತೀಯರು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 13:26 IST
Last Updated 10 ಫೆಬ್ರುವರಿ 2020, 13:26 IST
ಹಡಗಿನಲ್ಲಿ ಮನವಿ ಮಾಡುತ್ತಿರುವ ಭಾರತೀಯರು
ಹಡಗಿನಲ್ಲಿ ಮನವಿ ಮಾಡುತ್ತಿರುವ ಭಾರತೀಯರು   

ಕೋಲ್ಕತ್ತ: ಕೊರೊನಾ ವೈರಸ್‌ ಭೀತಿಯಿಂದಾಗಿಡೈಮಂಡ್‌ ಪ್ರಿನ್ಸೆಸ್‌ ಕ್ರೂಸ್‌ನ್ನು(ಪ್ರಯಾಣಿಕರ ದೊಡ್ಡ ಹಡಗು) ದಡಕ್ಕೆ ಪ್ರವೇಶಿಸದಂತೆ ಜಪಾನ್ತಡೆದಿದೆ.ಫೆಬ್ರುವರಿ 5ರಂದು ಜಪಾನ್ ಈ ಹಡಗು ದಡಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿತ್ತು.

ಈ ಹಡಗಿನಲ್ಲಿರುವ 66 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದೆ ಎಂದು ಡೈಮಂಡ್ ಪ್ರಿನ್ಸೆಸ್‌ನಲ್ಲಿರುವ ಭಾರತೀಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

3,700 ಪ್ರಯಾಣಿಕರು ಇರುವ ಈ ಕ್ರೂಸ್‌ನಲ್ಲಿ160 ಮಂದಿ ಭಾರತೀಯರಿದ್ದಾರೆ.

ADVERTISEMENT

ಈ ಪೈಕಿ ಉತ್ತರ ಬಂಗಾಳದ ಬಾಣಸಿಗ ಬಿನಯ್ ಕುಮಾರ್ ಸರ್ಕಾರ್, ಫೇಸ್‌ಬುಕ್‌ನಲ್ಲಿ ವಿಡಿಯೊವೊಂದನ್ನು ಸೋಮವಾರಪೋಸ್ಟಿಸಿದ್ದು ಭಾರತೀಯರನ್ನು ರಕ್ಷಿಸುವಂತೆ ಮೋದಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

'ಇವತ್ತು 66 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದೆ. ಈಗ ಹಡಗಿನಲ್ಲಿರುವ 137 ಮಂದಿ ಕೊರೊನಾ ಸೋಂಕಿಗೊಳಗಾಗಿದ್ದಾರೆ. ದಿನದಿಂದ ದಿನಕ್ಕೆ ಸೋಂಕು ವ್ಯಾಪಿಸುತ್ತಾ ಬರುತ್ತಿದ್ದು, ಸೋಂಕು ತಗಲಿರುವ ವ್ಯಕ್ತಿಗಳನ್ನು ಬೇರೆಡೆಗೆ ವರ್ಗಾಯಿಸಬೇಕಿದೆ. ಆದಷ್ಟು ಬೇಗ ನಮ್ಮನ್ನು ರಕ್ಷಿಸಿ. ಏನಾದರೂ ಆದರೆ ಏನು ಮಾಡಲಿ? ಭಾರತ ಸರ್ಕಾರಕ್ಕೆ ನಾನು ಮಾಡುವ ಮನವಿ ಏನೆಂದರೆ ಮೋದಿಜೀ ದಯವಿಟ್ಟು ನಮ್ಮನ್ನು ಸ್ಥಳಾಂತರ ಮಾಡಿ, ಮನೆಗೆ ಸುರಕ್ಷಿತವಾಗಿ ತಲುಪಿಸಿ' ಎಂದು ಬಿನಯ್ ಕುಮಾರ್ ವಿಡಿಯೊದಲ್ಲಿಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.