ADVERTISEMENT

ಲಾಕ್‍ಡೌನ್: ಪ್ರೇಯಸಿಯನ್ನು ಭೇಟಿಯಾಗಲು 1,300 ಕಿಮೀ ನಡೆದು ಬಂದ ಪ್ರಿಯಕರ

ಸಂಜಯ ಪಾಂಡೆ
Published 15 ಮೇ 2020, 13:23 IST
Last Updated 15 ಮೇ 2020, 13:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ಕೊರೊನಾವೈರಸ್ ಲಾಕ್‌ಡೌನ್ ಹೊತ್ತಲ್ಲಿ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಪ್ರಿಯಕರನೊಬ್ಬ ಅಹಮದಾಬಾದ್‌ನಿಂದ ವಾರಣಾಸಿವರೆಗೆ ಕಾಲ್ನಡಿಗೆಯಲ್ಲೇ ಬಂದಿದ್ದಾನೆ. ಈತ 2 ವಾರಗಳ ಕಾಲ ನಡೆದು ವಾರಣಾಸಿ ತಲುಪಿದ್ದು, ಕ್ರಮಿಸಿದ ದೂರ ಸುಮಾರು 1300 ಕಿಮೀ.

ಪೊಲೀಸರ ಮಾಹಿತಿ ಪ್ರಕಾರ ಮಹಿಳೆಯೊಬ್ಬರು ತಮ್ಮ ಮಗಳು ಮಂಗಳವಾರ ಸಂಜೆ ನಾಪತ್ತೆಯಾಗಿದ್ದಾಳೆ ಎಂದು ಬುಧವಾರ ವಾರಣಾಸಿಯ ಮಿರ್ಜಾಮುರಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರು ಸ್ವೀಕರಿಸಿದ ಪೊಲೀಸರು ನಾಪತ್ತೆಯಾದ ಯುವತಿಯ ಮೊಬೈಲ್ ಫೋನ್ ಲೊಕೇಶನ್ ಪತ್ತೆ ಹಚ್ಚಿದಾಗ ಆಕೆ ವಾರಣಾಸಿ ನಗರದ ಲಂಕಾ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಗುರುವಾರ ಪತ್ತೆಯಾಗಿದ್ದಾಳೆ.

ಆಕೆ ಮತ್ತು ಆಕೆಯ ಪ್ರಿಯಕರಕೆಲವು ತಿಂಗಳ ಹಿಂದೆ ಮಿಸ್ಡ್ ಕಾಲ್ ಮೂಲಕ ಪರಿಚಿತರಾಗಿದ್ದರು.ಅಹಮದಾಬಾದ್‌ನಲ್ಲಿರುವ ಯುವಕ ಈಕೆಯನ್ನು ಭೇಟಿಯಾಗುವುದಕ್ಕಾಗಿ ಲಾಕ್‍ಡೌನ್ ಲೆಕ್ಕಿಸಿದೆವಾರಣಾಸಿಗೆ ಕಾಲ್ನಡಿಗೆಯಲ್ಲೇ ಬಂದಿರುವ ವಿಷಯ ಬೆಳಕಿಗೆ ಬಂದಿದ್ದೇ ಯುವತಿಯ ನಾಪತ್ತೆ ಪ್ರಕರಣದಿಂದ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಮಂಗಳವಾರ ಸಂಜೆ ಮನೆಯಿಂದ ನಾಪತ್ತೆಯಾಗಿದ್ದ ಯುವತಿ ಸೈಕಲ್ ಮೂಲಕ ವಾರಣಾಸಿಗೆ ವಾಪಸ್ ಹೋಗಿದ್ದಾಳೆಯುವತಿ ತನ್ನ ಹೆತ್ತವರ ಬಳಿ ಹೋಗಲು ಒಪ್ಪಿದ್ದು, ಯುವಕನಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಇದೀಗ ಆತ ಅಹಮದಾಬಾದ್‌ಗೆ ವಾಪಸ್ ನಡೆದುಕೊಂಡೇ ಹೋಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.