ADVERTISEMENT

ಮುಂದಿನ ವರ್ಷ ಜನವರಿ 31ರ ವರೆಗೂ ಅಂತರರಾಷ್ಟ್ರೀಯ ವಿಮಾನ ಸೇವೆ ರದ್ದು

ಪಿಟಿಐ
Published 9 ಡಿಸೆಂಬರ್ 2021, 16:06 IST
Last Updated 9 ಡಿಸೆಂಬರ್ 2021, 16:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ಸೋಂಕಿನ ಕಳವಳ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತವು ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸೇವೆಯನ್ನು ಮುಂದಿನ ವರ್ಷ ಜನವರಿ 31ರ ವರೆಗೂ ರದ್ದು ಪಡಿಸಿದೆ.

ಡಿಸೆಂಬರ್‌ 15ರಿಂದ ಅಂತರರಾಷ್ಟ್ರೀಯ ವಿಮಾನ ಸೇವೆಗಳಿಗೆ ಮರುಚಾಲನೆ ನೀಡಬೇಕಾದ ನಿರ್ಧಾರವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಡಿಸೆಂಬರ್‌ 1ರಂದೇ ಮುಂದೂಡಿತ್ತು.

ಗುರುವಾರ ಪ್ರಕಟಣೆ ಹೊರಡಿಸಿರುವ ಡಿಜಿಸಿಎ, 'ಭಾರತಕ್ಕೆ ಬರುವ ಮತ್ತು ಇಲ್ಲಿಂದ ಹೊರಡುವ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರ ಸೇವೆಗಳನ್ನು 2022ರ ಜನವರಿ 31ರ ವರೆಗೂ ರದ್ದುಪಡಿಸಲಾಗಿದೆ' ಎಂದು ತಿಳಿಸಿದೆ.

ADVERTISEMENT

ಕೋವಿಡ್‌ ಕಾರಣದಿಂದ ಈ ಸೇವೆಯನ್ನು 2020ರ ಮಾರ್ಚ್‌ 23ರಿಂದ ರದ್ದುಪಡಿಸಲಾಗಿದೆ. ಆದರೆ, ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ 2020ರ ಮೇನಿಂದ ಮತ್ತು ವಿಶೇಷ ಒಪ್ಪಂದಗಳ ಅನ್ವಯ 2020ರ ಜುಲೈನಿಂದ ಆಯ್ದ ದೇಶಗಳಿಗೆ ವಿಶೇಷ ಪ್ರಯಾಣಿಕರ ವಿಮಾನಗಳ ಸಂಚಾರ ನಡೆಸಲಾಗಿದೆ.

ಅಮೆರಿಕ, ಇಂಗ್ಲೆಂಡ್‌, ಯುಎಇ, ಕೀನ್ಯಾ, ಭೂತಾನ್‌ ಹಾಗೂ ಫ್ರಾನ್ಸ್‌ ಸೇರಿದಂತೆ 32 ರಾಷ್ಟ್ರಗಳೊಂದಿಗೆ ಭಾರತವು ಏರ್‌ ಬಬಲ್‌ ವ್ಯವಸ್ಥೆಯಡಿ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದ ಇರುವ ರಾಷ್ಟ್ರಗಳಿಗೆ ಮತ್ತು ಅಲ್ಲಿಂದ ಭಾರತಕ್ಕೆ ವಿಶೇಷ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.