ADVERTISEMENT

ಕೆಮ್ಮಿನ ಸಿರಪ್‌ ದುರಂತ: ಡಾ.ಪ್ರವೀಣ್‌ ಸೋನಿ ಪತ್ನಿ ಬಂಧನ

ಪಿಟಿಐ
Published 4 ನವೆಂಬರ್ 2025, 15:21 IST
Last Updated 4 ನವೆಂಬರ್ 2025, 15:21 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಛಿಂದ್ವಾಢ: ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ 24 ಮಕ್ಕಳು ಮೃತಪಟ್ಟ ದುರಂತಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳವು (ಎಸ್‌ಐಟಿ) ಆರೋಪಿ ವೈದ್ಯ ಡಾ.ಪ್ರವೀಣ್‌ ಸೋನಿ ಅವರ ಪತ್ನಿಯನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಜ್ಯೋತಿ ಸೋನಿ ಅವರನ್ನು ಸೋಮವಾರ ರಾತ್ರಿ ಅವರ ನಿವಾಸದಲ್ಲಿ ಬಂಧಿಸಲಾಗಿದೆ’ ಎಂದು ಎಸ್‌ಐಟಿ ತಂಡದ ಉಸ್ತುವಾರಿ ಜಿತೇಂದ್ರ ಜಾಟ್‌ ತಿಳಿಸಿದರು.

ADVERTISEMENT

ಜ್ಯೋತಿ ಅವರು ಔಷಧ ಮಳಿಗೆಯೊಂದರ ಮಾಲೀಕರಾಗಿದ್ದು, ಇಲ್ಲಿಂದಲೇ ಹಲವು ಸಂತ್ರಸ್ತರಿಗೆ ಕೆಮ್ಮಿನ ಸಿರಪ್‌ ಅನ್ನು ವಿತರಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಮಕ್ಕಳಿಗೆ ‘ಕೋಲ್ಡ್ರಿಫ್‌’ ಔಷಧವನ್ನು ನೀಡುವಂತೆ ಬರೆದುಕೊಟ್ಟ ಆರೋಪದ ಮೇಲೆ ಡಾ.ಸೋನಿ ಅವರನ್ನು ಕಳೆದ ತಿಂಗಳು ಬಂಧಿಸಲಾಗಿದೆ. ಈ ಔಷಧ ಸೇವನೆ ಮಾಡಿದ ಬಳಿಕ ಮೂತ್ರಪಿಂಡ ವಿಫಲವಾಗಿ ಮಕ್ಕಳು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.