ಕಪ್‌ಲಿಂಗ್ ತುಂಡಾಗಿ ಬೇರ್ಪಟ್ಟ ಮಗಧ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು
X/@udaypratapbuxar
ಪಟ್ನಾ(ಬಿಹಾರ): ಕಪ್‌ಲಿಂಗ್(ಎರಡು ಬೋಗಿಗಳನ್ನು ಜೋಡಿಸುವ ಕೊಂಡಿ) ತುಂಡಾಗಿ ದೆಹಲಿ–ಇಸ್ಲಾಂಪುರ ಮಗಧ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಪತ್ಯೇಕಗೊಂಡ ಘಟನೆ ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ಇಂದು ನಡೆದಿದೆ.
‘ಜಿಲ್ಲೆಯ ಟ್ವಿನಿಗಂಜ್ ಮತ್ತು ರಘುನಾಥಪುರ ರೈಲು ನಿಲ್ದಾಣಗಳ ನಡುವೆ ಬೆಳಿಗ್ಗೆ 11.08 ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ’ ಎಂದು ಪೂರ್ವ ಕೇಂದ್ರ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸರಸ್ವತಿ ಚಂದ್ರ ತಿಳಿಸಿದರು.
‘ಟ್ವಿನಿಗಂಜ್ ನಿಲ್ದಾಣ ದಾಟಿ ಮುಂದೆ ಹೋಗುವಾಗ ರೈಲಿನ ಕಪ್‌ಲಿಂಗ್ ತುಂಡಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡ ಹಾಗೂ ತಾಂತ್ರಿಕ ತಂಡಗಳು ದೋಷವನ್ನು ಸರಿಪಡಿಸಿದ್ದಾರೆ. 2.25ರ ವೇಳೆಗೆ ರೈಲು ಪುನಃ ಸಂಚಾರ ಪ್ರಾರಂಭಿಸಿದೆ’ ಎಂದು ಅವರು ತಿಳಿಸಿದರು.
‘ಘಟನೆಗೆ ನಿಖರ ಕಾರಣವೇನು ಎಂದು ಕಂಡುಕೊಳ್ಳಲು ತನಿಖೆಗೆ ಆದೇಶಿಸಲಾಗಿದೆ. ಕಪ್‌ಲಿಂಗ್ ತುಂಡಾದ ಪರಿಣಾಮ ಸುಮಾರು ಮೂರು ಗಂಟೆ ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.