ADVERTISEMENT

ದೇಶದಲ್ಲಿ 53 ಲಕ್ಷ ಜನರಿಗೆ ಲಸಿಕೆ- ಶೇ 40ರಷ್ಟು ಇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 4:20 IST
Last Updated 23 ಜೂನ್ 2021, 4:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ 53 ಲಕ್ಷ ಜನರಿಗೆ ಮಂಗಳವಾರ ಕೋವಿಡ್ ಲಸಿಕೆ ಹಾಕಲಾಗಿದೆ. ಸೋಮವಾರದ ದಾಖಲೆಗೆ ಹೋಲಿಸಿದರೆ ಮಂಗಳವಾರದ ಪ್ರಮಾಣದಲ್ಲಿ ಶೇ 40ರಷ್ಟು ಇಳಿಕೆ ಕಂಡುಬಂದಿದೆ.

ಅತಿಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ ಎಂದರೆ, ಸರಬರಾಜು, ರಾಜ್ಯಗಳ ಸಹಯೋಗ ಮತ್ತು ಸಾರ್ವಜನಿಕರ ಉತ್ಸಾಹ ಅದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಕರ್ನಾಟಕದಲ್ಲಿ ಸೋಮವಾರ 11.38 ಲಕ್ಷ ಜನರಿಗೆ ಲಸಿಕೆ ಸಿಕ್ಕಿದೆ. ಆದರೆ ಮಂಗಳವಾರ 3.78 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.

‘ಸದ್ಯದ ಲಸಿಕೆ ಉತ್ಪಾದನೆ ಸಾಮರ್ಥ್ಯದ ಪ್ರಕಾರ, ಸೋಮವಾರ ನಡೆದ ದಾಖಲೆಯ ಲಸಿಕೆ ನೀಡಿಕೆಯನ್ನು ಎಲ್ಲ ದಿನಗಳಿಗೂ ಅನ್ವಯಿಸುವುದು ಸಾಧ್ಯವಿಲ್ಲ’ ಎಂದು ಕೋಯಿಕ್ಕೋಡ್‌ನ ಐಐಎಂ ಪ್ರಾಧ್ಯಾಪಕ ರಿಜೊ ಜಾನ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.