ADVERTISEMENT

Covid-19 India Update:ಒಂದೇ ದಿನ 60 ಸಾವು,ದೇಶದಲ್ಲಿ ಸಾವಿಗೀಡಾದವರ ಸಂಖ್ಯೆ 886

ಏಜೆನ್ಸೀಸ್
Published 27 ಏಪ್ರಿಲ್ 2020, 16:58 IST
Last Updated 27 ಏಪ್ರಿಲ್ 2020, 16:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್-19 ರೋಗದಿಂದ ಸಾವಿಗೀಡಾದವರ ಸಂಖ್ಯೆ 886 ಆಗಿದೆ. ಇಲ್ಲಿಯರೆಗೆ ಸೋಂಕು ದೃಢ ಪಟ್ಟ ಪ್ರಕರಣಗಳ ಸಂಖ್ಯೆ 21,132 ಆಗಿದ್ದು 6361 ಮಂದಿ ಗುಣಮುಖರಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ 1463 ಹೊಸ ಪ್ರಕರಣಗಳು ವರದಿಯಾಗಿದ್ದು 60 ಮಂದಿ ಸಾವಿಗೀಡಾಗಿದ್ದಾರೆ. ಒಂದೇ ದಿನದಲ್ಲಿ ಅತೀ ಹೆಚ್ಚು ಮರಣ ಸಂಭವಿಸಿದ್ದು ಇದೇ ಮೊದಲು.

ಉನ್ನಾವೊದಲ್ಲಿ ಪತ್ರಕರ್ತೆಗೆ ಕೊರೊನಾ ಸೋಂಕು

ADVERTISEMENT

ಉತ್ತರಪ್ರದೇಶದ ಉನ್ನೊವೊನಲ್ಲಿ ಪತ್ರಕರ್ತೆಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಲ್ಲಿ ವರದಿಯಾದ ಎರಡನೇ ಪ್ರಕರಣ ಇದಾಗಿದೆ.

ತಬ್ಲೀಗಿ ಜಮಾತ್ ಮುಖ್ಯಸ್ಥರಿಗೆಸೋಂಕು ಇಲ್ಲ

ತಬ್ಲೀಗಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್‌ಗೆ ಕೊರೊನಾ ಸೋಂಕು ಇಲ್ಲ ಎಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿದೆ.

ಲಖನೌನಲ್ಲಿ ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ

ಲಖನೌದಲ್ಲಿ ಇದೇ ಮೊದಲ ಬಾರಿ 58ರ ಹರೆಯದ ಕೋವಿಡ್ ರೋಗಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿದೆ. ಕೋವಿಡ್ ರೋಗ ಮುಕ್ತರಾಗಿದ್ದ ಮೂವರು ಈ ಪ್ಲಾಸ್ಮಾ ದಾನ ಮಾಡಿದ್ದರು ಎಂದು ಕಿಂಗ್ ಜಾರ್ಜ್ಸ್ ಮೆಡಿಕಲ್ ಯುನಿವರ್ಸಿಟಿಯ ಉಪ ಕುಲಪತಿ ಎಂಎಲ್‌ಬಿ ಭಟ್ ಹೇಳಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ

ಸೋಮವಾರ 159 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು, ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. 16 ಮಂದಿ ಗುಣಮುಖರಾಗಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕಚೇರಿ ಹೇಳಿದೆ.

ಕೇರಳದಲ್ಲಿಂದು 13 ಹೊಸ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ತಮಿಳುನಾಡಿನಿಂದ ಬಂದ 5 ಮತ್ತು ವಿದೇಶದಿಂದ ಬಂದ ಒಬ್ಬರು ಮತ್ತು ಅವರೊಂದಿಗೆ ಒಡನಾಡಿದ ಜನರಿಗೆ ಸೋಂಕು ತಗುಲಿದೆ. ಕೋಟ್ಟಯಂನಲ್ಲಿ -6, ಇಡುಕ್ಕಿ -4, ಪಾಲಕ್ಕಾಡ್, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. 13 ಮಂದಿ ಸೋಮವರಾ ಗುಣಮುಖರಾಗಿದ್ದಾರೆ. 132 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ

ಮಹಾರಾಷ್ಟ್ರವು ದೇಶದಲ್ಲೇ ಅತಿಹೆಚ್ಚು ಜನರಿಗೆ ಸೋಂಕು ತಗುಲಿರುವ ಮತ್ತು ಮೃತಪಟ್ಟಿರುವ ರಾಜ್ಯವಾಗಿದೆ. ಅಲ್ಲಿ ಈವರೆಗೆ 8,068 ಜನರಿಗೆ ಸೋಂಕು ತಗುಲಿದ್ದು, 342 ಜನ ಮೃತಪಟ್ಟಿದ್ದಾರೆ. ಗುಜರಾತ್‌ನಲ್ಲಿ ಸೋಂಕು ಪ್ರಕರಣಗಳು 3,301ಕ್ಕೆ ಏರಿಕೆಯಾಗಿದ್ದು, 151 ಜನ ಮೃತಪಟ್ಟಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದ ನಂತರ ಗುಜರಾತ್‌ ಕೊರೊನಾ ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿದೆ.

ದೆಹಲಿಯಲ್ಲಿ ಒಟ್ಟು 2, 918 ಪ್ರಕರಣಗಳ ಪೈಕಿ 54 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 1,885 ಪ್ರಕರಣಗಳು, 24 ಮಂದಿ ಸಾವು; ರಾಜಸ್ಥಾನದಲ್ಲಿ 2,185 ಪ್ರಕರಣಗಳು, 33 ಮಂದಿ ಮೃತಪಟ್ಟಿದ್ದಾರೆ.

‘ಕೊರೊನಾ ವೈರಸ್ ಸೋಂಕಿಗೀಡಾಗಿದ್ದ ಅನೇಕ ಹಾಟ್‌ಸ್ಪಾಟ್ ಜಿಲ್ಲೆಗಳು (ಎಚ್‌ಎಸ್‌ಡಿ) ಈಗ ಹಾಟ್‌ಸ್ಪಾಟ್ ಅಲ್ಲದ ಜಿಲ್ಲೆಗಳಾಗುತ್ತಿದ್ದು ದೇಶದಲ್ಲಿ ಪರಿಸ್ಥಿತಿ ಸುಧಾರಣೆಯಾಗುತ್ತಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭಾನುವಾರ ಹೇಳಿದ್ದರು. ಮತ್ತೊಂದೆಡೆ, ಕೆಲವು ರಾಜ್ಯಗಳಲ್ಲಿ ಸೋಂಕು ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿವೆ. ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆ ದಿನೇದಿನೇ ವೇಗವಾಗಿ ಏರಿಕೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.