ADVERTISEMENT

ಮೊದಲ ದಿನ ಯಶಸ್ವಿ ಅಭಿಯಾನ: 1.65 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್‌ ಲಸಿಕೆ

ಪಿಟಿಐ
Published 16 ಜನವರಿ 2021, 15:53 IST
Last Updated 16 ಜನವರಿ 2021, 15:53 IST
ಕೋವಿಡ್‌–19 ಲಸಿಕೆ ಪಡೆದ ದೇಶದ ಮೊದಲ ವ್ಯಕ್ತಿ, ನೈರ್ಮಲ್ಯ ಕೆಲಸಗಾರರಾಗಿರುವ ಮನೀಶ್‌ ಕುಮಾರ್‌ –ರಾಯಿಟರ್ಸ್‌ ಚಿತ್ರ
ಕೋವಿಡ್‌–19 ಲಸಿಕೆ ಪಡೆದ ದೇಶದ ಮೊದಲ ವ್ಯಕ್ತಿ, ನೈರ್ಮಲ್ಯ ಕೆಲಸಗಾರರಾಗಿರುವ ಮನೀಶ್‌ ಕುಮಾರ್‌ –ರಾಯಿಟರ್ಸ್‌ ಚಿತ್ರ   

ನವದೆಹಲಿ: ಕೋವಿಡ್‌–19 ಲಸಿಕೆ ಅಭಿಯಾನದ ಮೊದಲ ದಿನ ದೇಶದಾದ್ಯಂತ ಇದ್ದ 3 ಸಾವಿರಕ್ಕೂ ಅಧಿಕ ಲಸಿಕಾ ಕೇಂದ್ರಗಳಲ್ಲಿ 1.65 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಕೋವಿಡ್‌–19 ಲಸಿಕೆಯ ಚುಚ್ಚುಮದ್ದು ನೀಡಲಾಗಿದ್ದು, ಲಸಿಕೆ ಪಡೆದ ಬಳಿಕ ಆಸ್ಪತ್ರೆಗೆ ದಾಖಲಾದ ಯಾವುದೇ ಘಟನೆಗಳು ಇಲ್ಲಿಯವರೆಗೂ ನಡೆದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಮೊದಲ ದಿನ ಯಶಸ್ವಿಯಾಗಿ ಲಸಿಕೆ ಅಭಿಯಾನ ನಡೆದಿದೆ.16,755 ಸಿಬ್ಬಂದಿ ಈ ಅಭಿಯಾನದಲ್ಲಿ ಭಾಗವಹಿಸಿದ್ದರು ಎಂದು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್‌ ಅಗ್ನಾನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಗಳ ಚುಚ್ಚುಮದ್ದು ನೀಡಲಾಗಿದ್ದು, ಆಂಧ್ರ ಪ್ರದೇಶದಲ್ಲಿ 16,963 ಹಾಗೂ ಬಿಹಾರದಲ್ಲಿ 16,401, ಮಹಾರಾಷ್ಟ್ರದಲ್ಲಿ 15,727 ಜನರಿಗೆ ಲಸಿಕೆ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.