ADVERTISEMENT

ಮುಂಬೈನಲ್ಲಿ ಕೋವಿಡ್-19 ಲಸಿಕೆ ಹಂಚಿಕೆ ಎರಡು ದಿನಗಳಿಗೆ ಸ್ಥಗಿತ

ಮೃತ್ಯುಂಜಯ ಬೋಸ್
Published 17 ಜನವರಿ 2021, 1:41 IST
Last Updated 17 ಜನವರಿ 2021, 1:41 IST
ದೇಶದೆಲ್ಲೆಡೆ ಕೋವಿಡ್-19 ಲಸಿಕೆ ಹಂಚಿಕೆ ಅಭಿಯಾನ ಆರಂಭ
ದೇಶದೆಲ್ಲೆಡೆ ಕೋವಿಡ್-19 ಲಸಿಕೆ ಹಂಚಿಕೆ ಅಭಿಯಾನ ಆರಂಭ   

ಮುಂಬೈ: ವಾಣಿಜ್ಯ ನಗರಿ ಮುಂಬೈ ಹಾಗೂ ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಕೋವಿಡ್-19 ಲಸಿಕೆ ವಿತರಣೆಯನ್ನು ಎರಡು ದಿನಗಳ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

'ಕೋವಿನ್' ಆ್ಯಪ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಜನವರಿ 17 ಹಾಗೂ 18ರಂದು ಮುಂಬೈನಲ್ಲಿ ಕೋವಿಡ್-19 ಲಸಿಕೆ ಹಂಚಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ ಮಾಹಿತಿ ಒದಗಿಸಿದೆ.

ಕೋವಿಡ್-19 ಲಸಿಕೆ ಪಡೆಯುವ ಮುಂಚೂಣಿಯ ಸೇನಾನಿಗಳ ಹೆಸರುಗಳನ್ನು ಕೋವಿನ್ ಆ್ಯಪ್‌ನಲ್ಲಿ ನೊಂದಾಯಿಸಬೇಕಿದೆ. ಈ ಸಂಬಂಧ ತಾಂತ್ರಿಕ ದೋಷ ಕಂಡುಬಂದಿದೆ. ಇದನ್ನೀಗ ಕೇಂದ್ರ ಸರ್ಕಾರ ಸರಿಪಡಿಸುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ADVERTISEMENT

ಮುಂಬೈನಲ್ಲಿ ಭಾನುವಾರ ಹಾಗೂ ಸೋಮವಾರ ಕೋವಿಡ್-19 ಲಸಿಕೆ ವಿತರಣೆಯು ಸ್ಥಗತಿಗೊಳ್ಳಲಿದ್ದು, ಮಂಗಳವಾರದಂದು ಆರಂಭಗೊಳ್ಳಲಿದೆ.

ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ರಾಜೇಶ್ ತೋಪೆ ಸಮಸ್ಯೆಯನ್ನು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಕೇಂದ್ರ ಸಚಿವರು ತುರ್ತಾಗಿ ಪರಿಹರಿಸುವ ಭರವಸೆ ನೀಡಿದ್ದಾರೆ.

ಕೋವಿಡ್-19 ಲಸಿಕೆ ಚುಚ್ಚುಮದ್ದು ಪಡೆಯುವ ಎಲ್ಲರೂ ಕೋವಿನ್ ಆ್ಯಪ್‌ನಲ್ಲಿ ನೊಂದಾಯಿಸುವುದು ಕಡ್ಡಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.