ADVERTISEMENT

ಯೋಧನಿಗೆ ಕೋವಿಡ್‌–19 ಸೋಂಕು ಹಿನ್ನೆಲೆ: ಯುದ್ಧ ಕಸರತ್ತು, ತರಬೇತಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 2:56 IST
Last Updated 19 ಮಾರ್ಚ್ 2020, 2:56 IST
ಭಾರತೀಯ ಸೇನೆ
ಭಾರತೀಯ ಸೇನೆ   

ಶ್ರೀನಗರ: ಭಾರತೀಯ ಯೋಧರೊಬ್ಬರಿಗೆ ಬುಧವಾರ ಕೋವಿಡ್‌ –19 ಸೋಂಕು ತಗುಲಿರುವುದು ಧೃಡಪಟ್ಟಿರುವ ಹಿನ್ನೆಲೆಯಲ್ಲಿ ಯುದ್ಧ ಕಸರತ್ತು ಮತ್ತು ತರಬೇತಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.

ಲಡಾಖ್ ಸ್ಕೌಟ್ ರೆಜಿಮೆಂಟ್‌ನ ಸೈನಿಕರೊಬ್ಬರಿಗೆ ಕೋವಿಡ್‌–19 ಸೋಂಕು ಇರುವುದು ಕಂಡುಬಂದಿದೆ ಎಂದು ಭಾರತೀಯ ಸೇನೆ ತಿಳಿಸಿತ್ತು.

ಲೇಹ್‌ನ ಚುಹೋಟ್ ಗ್ರಾಮದ ನಿವಾಸಿಯಾಗಿರುವ ಕೋವಿಡ್‌–19 ಸೋಂಕಿತ ಸೈನಿಕ ಫೆಬ್ರವರಿ 25 ರಿಂದ ರಜೆಯಲ್ಲಿದ್ದರು. ಮಾರ್ಚ್ 2 ರಂದು ಮತ್ತೆ ಕರ್ತವ್ಯಕ್ಕೆ ಸೇರಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಮಾರ್ಚ್ 7 ರಂದು ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಮಾರ್ಚ್ 16 ರಂದು ಅವರ ಮೇಲೆ ಪರೀಕ್ಷೆ ನಡೆಸಿದ ನಂತರ ಅವರಲ್ಲಿ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿತ್ತು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸೇನೆಯು ಯುದ್ಧ ಕಸರತ್ತು, ಸಮಾವೇಶ‌ ಮತ್ತು ತರಬೇತಿ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

ಕೇಂದ್ರಾಡಳಿತ ಪ್ರದೇಶ ಲಡಾಕ್‌ನಲ್ಲಿ ಸದ್ಯ ಕೊರೊನಾ ಪೀಡಿತರ ಸಂಖ್ಯೆ ಎಂಟಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.