ADVERTISEMENT

ಕೋವಿಡ್‌-19 ಹಿನ್ನೆಲೆ: ಆ. 12ರವರೆಗೆ ರೈಲು ಸೇವೆ ಇಲ್ಲ

ಪಿಟಿಐ
Published 25 ಜೂನ್ 2020, 21:04 IST
Last Updated 25 ಜೂನ್ 2020, 21:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಾಮಾನ್ಯ, ಎಕ್ಸ್‌ಪ್ರೆಸ್‌ ಮತ್ತು ಪ್ಯಾಸೆಂಜರ್‌ ರೈಲು ಸೇವೆ ಹಾಗೂ ಸಬ್‌ ಅರ್ಬನ್‌ ಸೇರಿದಂತೆ ಎಲ್ಲ ರೀತಿಯ ಪ್ರಯಾಣಿಕ ರೈಲುಗಳ ಸೇವೆಯನ್ನು ಆಗಸ್ಟ್ 12ರವರೆಗೆ ರದ್ದುಪಡಿಸಲಾಗಿದೆ ಎಂದು ರೈಲ್ವೆ ಮಂಡಳಿಯು ಗುರುವಾರ ಪ್ರಕಟಿಸಿದೆ.

ದೇಶದಾದ್ಯಂತ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ರಾಜಧಾನಿ ಎಕ್ಸ್‌ಪ್ರೆಸ್‌ ಮಾರ್ಗದಲ್ಲಿ ಸಂಚರಿಸುತ್ತಿರುವ 12 ವಿಶೇಷ ರೈಲುಗಳು ಹಾಗೂ ಜೂನ್‌ 1ರಿಂದ ಕಾರ್ಯಾರಂಭ ಮಾಡಿರುವ 100 ಇತರೆ ರೈಲುಗಳ ಸಂಚಾರ ಎಂದಿನಂತೆ ಇರಲಿದೆ. ನಿಯಮಿತ ವೇಳಾಪಟ್ಟಿಯಂತೆ ಜುಲೈ 1ರಿಂದ ಆಗಸ್ಟ್‌ 12ರವರೆಗೆ ಮುಂಗಡ ಕಾದಿರಿಸಿದ್ದ ಟಿಕೆಟ್‌ಗಳು ರದ್ದಾಗಲಿವೆ. ಪೂರ್ಣ ಪ್ರಮಾಣದಲ್ಲಿ ಹಣವನ್ನು ಹಿಂದಿರುಗಿಸಲಾಗುವುದು ಎಂದು ಮೂಲಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.