ADVERTISEMENT

ಕೋವಿಡ್–19 ಭೀತಿ | 200 ರೈಲು ಸಂಚಾರ ರದ್ದು, ಇಲಾಖೆಗೆ ₹ 450 ಕೋಟಿ ನಷ್ಟ ಸಾಧ್ಯತೆ

ಏಜೆನ್ಸೀಸ್
Published 20 ಮಾರ್ಚ್ 2020, 12:00 IST
Last Updated 20 ಮಾರ್ಚ್ 2020, 12:00 IST
   

ನವದೆಹಲಿ:ಕೋವಿಡ್‌–19 ಭೀತಿಯಿಂದಾಗಿ ಸುಮಾರು 200 ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ರದ್ದು ಮಾಡಿದೆ. ಇದರಿಂದಾಗಿ ಮಾರ್ಚ್‌ ತಿಂಗಳಲ್ಲಿ ಸುಮಾರು ₹ 450 ಕೋಟಿ ನಷ್ಟ ಸಂಭವಿಸಲಿದೆ ಎಂದು ಮೂಲಗಳು ತಿಳಿಸಿದ್ದು,ಮುಂದಿನ ದಿನಗಳಲ್ಲಿ ಇನ್ನೂ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗುವುದು ಎನ್ನಲಾಗಿದೆ.

ಈ ತಿಂಗಳಲ್ಲಿ ಸೋಂಕು ಭೀತಿಯಿಂದಾಗಿ ಟಿಕೆಟ್‌ ರದ್ದು ಪಡಿಸಿದವರ ಸಂಖ್ಯೆಯೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಾರ್ಚ್‌ 1 ರಿಂದ 12ರ ಅವಧಿಯಲ್ಲಿ ಕೇವಲ ಉತ್ತರ ರೈಲ್ವೆ ವಲಯದಲ್ಲಿಯೇ ಸುಮಾರು 12 ಲಕ್ಷ ಟಿಕೆಟ್‌ಗಳು ರದ್ದಾಗಿವೆ.

ಜನರು ಅನವಶ್ಯಕವಾಗಿ ಪ್ರಯಾಣಿಸುವುದನ್ನು ತಪ್ಪಿಸಲು ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿದೆ.

ADVERTISEMENT

ರಿಯಾಯಿತಿ ದರದಲ್ಲಿಬುಕ್‌ ಮಾಡಿಕೊಂಡಿದ್ದ ಮೀಸಲು ಹಾಗೂ ಮೀಸಲು ರಹಿತ ಟಿಕೆಟ್‌ಗಳನ್ನು ಮಾರ್ಚ್‌ 20ರ ಬಳಿಕ ರದ್ದು ಮಾಡಿಕೊಂಡಿರುವಹಿರಿಯ ನಾಗರಿಕರಿಕರಿಗೆಮುಂದಿನ ಸೂಚನೆಗಳು ಬರುವವರೆಗೆ ಹಣ ಹಿಂದಿರುಗಿಸಲಾಗುವುದು.

ಜಗತ್ತಿನಾದ್ಯಂತಇದುವರೆಗೆ ಸುಮಾರು 2,09,839 ಜನರಲ್ಲಿ ಸೊಂಕು ಪತ್ತೆಯಾಗಿದ್ದು,8,778 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ಇನ್ನೂರು ದಾಟಿದೆ.ಐದು ಮಂದಿ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.