ಜೈಪುರ: ಗೋ ಹತ್ಯೆ ಮಾಡುವುದು ಭಯೋತ್ಪಾದನೆಗಳಿಗಿಂತಲೂ ದೊಡ್ಡ ಅಪರಾಧ ಎಂದು ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಹೇಳಿದ್ದಾರೆ.
ಗೋರಕ್ಷಕರ ದಾಳಿ ಹಾಗೂ ವ್ಯಕ್ತಿಗಳನ್ನು ಹೊಡೆದು ಸಾಯಿಸುವ ಪ್ರಕರಣಗಳ ಬಗ್ಗೆ ಮಾತನಾಡಿದ ಅಹುಜಾ, ಗೋಹತ್ಯೆ ಮಾಡುವಾಗ ಹಲವಾರು ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ.ಗೋಹತ್ಯೆ ಭಯೋತ್ಪಾದನೆಗಿಂತಲೂ ದೊಡ್ಡದು. ಉಗ್ರರು ನಾಲ್ಕೈದು ಮಂದಿಯನ್ನು ಕೊಲ್ಲುತ್ತಾರೆ ಆದರೆ ಗೋಹತ್ಯೆ ಮೂಲಕ ಕೋಟಿ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.