ADVERTISEMENT

ಪುಲ್ವಾಮ ದಾಳಿ: ಸಾಮಾಜಿಕ ಮಾಧ್ಯಮಗಳಲ್ಲಿ ಫೇಕ್ ಫೋಟೊ ಶೇರ್ ಮಾಡಬೇಡಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 11:23 IST
Last Updated 17 ಫೆಬ್ರುವರಿ 2019, 11:23 IST
ಕೃಪೆ: ಎಎನ್‍ಐ
ಕೃಪೆ: ಎಎನ್‍ಐ   

ನವದೆಹಲಿ: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಮೃತದೇಹ ಮತ್ತು ದೇಹದ ಭಾಗಗಳ ಫೇಕ್ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಬೇಡಿ ಎಂದು ಸಿಆರ್‌ಪಿಎಫ್ ಟ್ವೀಟ್ ಮಾಡಿದೆ.

ಕೆಲವರು ಸಾಮಾಜಿಕ ಮಾಧ್ಯಗಳಲ್ಲಿ ಪುಲ್ವಾಮದಲ್ಲಿ ಮಡಿದ ಯೋಧರ ದೇಹದ ಭಾಗಗಳು ಎಂದು ಫೇಕ್ ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿರಬೇಕಾದ ಈ ಸಮಯದಲ್ಲಿ ಈ ರೀತಿಯ ಚಿತ್ರವನ್ನು ಹಂಚಿಕೊಳ್ಳಬೇಡಿ. ಈ ರೀತಿ ಫೋಟೊ, ಪೋಸ್ಟ್ ಗಳನ್ನು ಲೈಕ್, ಶೇರ್ ಮಾಡಬಾರದು.ಇಂಥಾ ವಿಷಯಗಳು ಕಂಡುಬಂದರೆ webpro@crpf.gov.in ಗೆ ರಿಪೋರ್ಟ್ ಮಾಡಿ ಎಂದು ಟ್ವೀಟ್‍ನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.