ADVERTISEMENT

ಕ್ರೂಸ್ ಡ್ರಗ್ಸ್‌ ಪ್ರಕರಣ: 2ನೇ ದಿನವೂ ಎನ್‌ಸಿಬಿ ಎದುರು ಹಾಜರಾದ ಪ್ರಭಾಕರ್ ಸೈಲ್

ಪಿಟಿಐ
Published 9 ನವೆಂಬರ್ 2021, 9:37 IST
Last Updated 9 ನವೆಂಬರ್ 2021, 9:37 IST
ಮುಂಬೈನ ಬಾಂದ್ರಾ ಉಪನಗರದಲ್ಲಿರುವ ಸಿಆರ್‌ಪಿಎಫ್ ಕ್ಯಾಂಪ್‌ನಲ್ಲಿ ಸೋಮವಾರ ಎನ್‌ಸಿಬಿ ವಿಚಕ್ಷಣಾ ದಳದ ಎದುರು ಹಾಜರಾದ ಕ್ರೂಸ್‌ ಡ್ರಗ್ಸ್ ಪ್ರಕರಣದ ಸ್ವತಂತ್ರ ಸಾಕ್ಷ್ಯಿದಾರ ಪ್ರಭಾಕರ್ ಸೈಲ್(ಎಡಭಾಗ).
ಮುಂಬೈನ ಬಾಂದ್ರಾ ಉಪನಗರದಲ್ಲಿರುವ ಸಿಆರ್‌ಪಿಎಫ್ ಕ್ಯಾಂಪ್‌ನಲ್ಲಿ ಸೋಮವಾರ ಎನ್‌ಸಿಬಿ ವಿಚಕ್ಷಣಾ ದಳದ ಎದುರು ಹಾಜರಾದ ಕ್ರೂಸ್‌ ಡ್ರಗ್ಸ್ ಪ್ರಕರಣದ ಸ್ವತಂತ್ರ ಸಾಕ್ಷ್ಯಿದಾರ ಪ್ರಭಾಕರ್ ಸೈಲ್(ಎಡಭಾಗ).   

ಮುಂಬೈ: ಐಷಾರಾಮಿ ಕ್ರೂಸ್‌ ಡ್ರಗ್ಸ್‌ ಪ್ರಕರಣದ ಸಾಕ್ಷಿದಾರ ಪ್ರಭಾಕರ್ ಸೈಲ್ ಮಂಗಳವಾರವೂ ಮಾದಕ ವಸ್ತು ನಿಯಂತ್ರಣ ಸಂಸ್ಥೆಯ(ಎನ್‌ಸಿಬಿ) ದೆಹಲಿ ವಲಯದ ವಿಚಕ್ಷಣದಳದ ಎದುರು ವಿಚಾರಣೆಗೆ ಹಾಜರಾದರು.

ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮುಂಬೈನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿರುವ ದೆಹಲಿ ವಲಯದ ಎನ್‌ಸಿಬಿ ವಿಚಕ್ಷಣಾ ದಳದ ಅಧಿಕಾರಿಗಳು, ಸಾಕ್ಷಿದಾರರ ವಿಚಾರಣೆ ನಡೆಸುತ್ತಿದ್ದಾರೆ.

ಎನ್‌ಸಿಬಿ (ಉತ್ತರ ವಲಯ) ಉಪ ಮಹಾನಿರ್ದೇಶಕ ಗ್ಯಾನೇಶ್ವರ್ ಸಿಂಗ್ ನೇತೃತ್ವದ ದೆಹಲಿಯ ಎನ್‌ಸಿಬಿ ವಿಚಕ್ಷಣಾ ದಳ ಸೋಮವಾರ ಪ್ರಭಾಕರ್ ಅವರನ್ನು ಹತ್ತು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು. ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.