ADVERTISEMENT

ನಿವೃತ್ತ ಪ್ರಾಧ್ಯಾಪಕನಿಗೆ ₹78 ಲಕ್ಷ ಸೈಬರ್‌ ವಂಚನೆ: 14 ಮಂದಿ ಬಂಧನ

ಪಿಟಿಐ
Published 27 ನವೆಂಬರ್ 2025, 15:46 IST
Last Updated 27 ನವೆಂಬರ್ 2025, 15:46 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಭೀಮಾವರಂ: ಕಾಂಬೋಡಿಯಾದಿಂದ ಕಾರ್ಯನಿರ್ವಹಿಸುತ್ತಿರುವ ಸೈಬರ್‌ ವಂಚನೆ ಜಾಲವೊಂದಕ್ಕೆ ಸಂಬಂಧಿಸಿದ 14 ಸದಸ್ಯರನ್ನು ಆಂಧ್ರ ಪ್ರದೇಶ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಡಿಜಿಟಲ್‌ ಅರೆಸ್ಟ್‌ ಮೂಲಕ 75 ವರ್ಷದ ಭೀಮಾವರಂನ ನಿವೃತ್ತ ಪ್ರಾಧ್ಯಾಪಕನಿಗೆ ಇವರು ₹78 ಲಕ್ಷ ವಂಚಿಸಿದ್ದಾರೆ.

ಪಶ್ಚಿಮ ಗೋದಾವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅದ್ನಾನ್‌ ನಯೀಮ್‌ ಆಸ್ಮಿ ಅವರು ಗುರುವಾರ ಮಾಹಿತಿ ನೀಡಿ, ‘ವಾಟ್ಸ್‌ಆ್ಯಪ್‌ ಕರೆ ಮಾಡಿ, ತಮ್ಮನ್ನು ತಾವು ಬೆಂಗಳೂರು ಪೊಲೀಸರು ಎಂದು ಬಿಂಬಿಸಿಕೊಂಡ ವಂಚಕರು ಸುಪ್ರೀಂ ಕೋರ್ಟ್‌ನ ನಕಲು ದಾಖಲೆಗಳನ್ನು ತೋರಿಸಿ ಹಣ ವಂಚಿಸಿದ್ದಾರೆ’ ಎಂದರು.

ADVERTISEMENT

‘ವಂಚಿಸಿದ್ದ ಹಣದಲ್ಲಿ ₹42 ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ. ವಿವಿಧ ಬ್ಯಾಂಕ್‌ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಅಂತರರಾಷ್ಟ್ರೀಯ ಸಿಮ್‌ ಕಾರ್ಡ್‌ಗಳಿದ್ದ 15 ಮೊಬೈಲ್‌, ಬ್ಯಾಂಕ್‌ ದಾಖಲೆಗಳು, ಪಾಸ್‌ಪೋರ್ಟ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜಾಲದ ಪ್ರಮುಖ ಆರೋಪಿ ಮುಂಬೈನ ರಹತೆ ಜೆ. ನಾರಾಯಣ್‌ ಎಂಬುವರು ಪರಾರಿಯಾಗಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.