ADVERTISEMENT

ದುರ್ಬಲಗೊಂಡ 'ಮೊಂಥಾ' ಚಂಡಮಾರುತದ ತೀವ್ರತೆ: ಹವಾಮಾನ ಇಲಾಖೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2025, 3:10 IST
Last Updated 29 ಅಕ್ಟೋಬರ್ 2025, 3:10 IST
<div class="paragraphs"><p>(ಚಿತ್ರ ಕೃಪೆ: X/<a href="https://x.com/Indiametdept">@Indiametdept</a>)</p></div>

(ಚಿತ್ರ ಕೃಪೆ: X/@Indiametdept)

   

ಬೆಂಗಳೂರು: ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ 'ಮೊಂಥಾ' ಚಂಡಮಾರುತದ ತೀವ್ರತೆ ದುರ್ಬಲಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಮೊಂಥಾ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆಂಧ್ರ ಪ್ರದೇಶದ ಕರಾವಳಿ ಪ್ರದೇಶವನ್ನು ಅಪ್ಪಳಿಸಿದ ಬಳಿಕ 'ತೀವ್ರ ಸ್ವರೂಪ'ದಿಂದ 'ಚಂಡಮಾರುತ' ಆಗಿ ದುರ್ಬಲಗೊಂಡಿದೆ ಎಂದು ಐಎಂಡಿ ಹೇಳಿದೆ.

ADVERTISEMENT

ಆಂಧ್ರಪ್ರದೇಶದ ಕರಾವಳಿಯಲ್ಲಿ ಕಳೆದ ಆರು ಗಂಟೆಗಳಲ್ಲಿ ಗಾಳಿಯ ವೇಗ 10 ಕಿ.ಮೀ.ಗೆ ಇಳಿಕೆ ಕಂಡಿದ್ದು, ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ.

ಇಂದು ಆಂಧ್ರಪ್ರದೇಶದ ಕರಾವಳಿಯಾದ್ಯಂತ ವಾಯುವ್ಯ ದಿಕ್ಕಿನತ್ತ ಚಲಿಸಲಿದೆ. ಮುಂದಿನ ಆರು ಗಂಟೆಗಳಲ್ಲಿ ಚಂಡಮಾರುತದ ತೀವ್ರತೆ ಇರಲಿದೆ ಎಂದು ಹೇಳಿದೆ.

ಆಂಧ್ರಪ್ರದೇಶದ ನರ್ಸಾಪುರ, ಮಚಲಿಪಟ್ಟಣ, ಕಾಕಿನಾಡ, ವಿಶಾಖಪಟ್ಟಣದಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಲಿದೆ.

ಅತ್ತ ಅರಬ್ಬೀ ಸಮುದ್ರದಲ್ಲಿ ವಾಯು ಭಾರ ಕುಸಿತ ಉಂಟಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.