ADVERTISEMENT

ದಾಭೋಲ್ಕರ್‌ ಹತ್ಯೆಗೆ ಬಳಸಿದ್ದ ಪಿಸ್ತೂಲು ವಶ

ಪಿಟಿಐ
Published 6 ಮಾರ್ಚ್ 2020, 20:05 IST
Last Updated 6 ಮಾರ್ಚ್ 2020, 20:05 IST
ನರೇಂದ್ರ ದಾಭೋಲ್ಕರ್‌
ನರೇಂದ್ರ ದಾಭೋಲ್ಕರ್‌   

ನವದೆಹಲಿ: ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆ ತನಿಖೆಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯ ಎಂದು ಹೇಳಲಾಗಿರುವ ಪಿಸ್ತೂಲು ಅನ್ನು ಸಿಬಿಐ ಅಧಿಕಾರಿಗಳು ವಿಭಿನ್ನ ಕಾರ್ಯಾಚರಣೆ ನಡೆಸಿ ವಶಕ್ಕೆಪಡೆದುಕೊಂಡಿದ್ದಾರೆ.

ದುಬೈ ಮೂಲದ ಕಂಪನಿಯ ನೆರವು ಪಡೆದು, ನಾರ್ವೆಯ ಪರಿಕರಗಳ ಸಹಾಯದಿಂದ ವಶಕ್ಕೆ ಪಡೆಯಲಾಗಿದೆ.ಸಾಗರತೀರದಲ್ಲಿ ಮರಳಿನಲ್ಲಿ 40 ಅಡಿ ಆಳದಲ್ಲಿ ಹುದುಗಿಸಿದ್ದ ಗನ್‌ ಅನ್ನು ವಶಕ್ಕೆ ಮಹಾರಾಷ್ಟ್ರದ ಠಾಣೆ ಬಳಿ ವಶಕ್ಕೆ ಪಡೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗನ್‌ ಅನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಗೆ ಒಟ್ಟು ₹ 7.5 ಕೋಟಿ ವೆಚ್ಚವಾಗಿವೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಜಂಟಿಯಾಗಿ ಇದನ್ನು ಭರಿಸಿವೆ.

ADVERTISEMENT

ವಿಚಾರವಾದಿಗಳಾದ ದಾಭೋಲ್ಕರ್‌, ಗೌರಿ ಲಂಕೇಶ್, ಎಂ.ಎಂ. ಕಲಬುರ್ಗಿ, ಗೋವೀಂದ ಪಾನ್ಸಾರೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಕಾರ್ಯಶೈಲಿ ಬಹುತೇಕ ಏಕರೂಪದಲ್ಲಿತ್ತು.

ಆಗಸ್ಟ್‌ 20, 2013ರಲ್ಲಿ ನಡೆದ ದಾಭೋಲ್ಕರ್‌ ಹತ್ಯೆ ಪ್ರಕರಣವನ್ನು ಸಿಬಿಐ ನಡೆಸುತ್ತಿದೆ. ಕರ್ನಾಟಕ ಪೊಲೀಸರು ಗೌರಿಲಂಕೇಶ್‌, ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.