ADVERTISEMENT

ಪೇಜಾವರ ಶ್ರೀಗಳ ಜೀವ ಉಳಿಸಿದ್ದ ದಲಿತ ಬಾಲಕ 

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 8:50 IST
Last Updated 29 ಡಿಸೆಂಬರ್ 2019, 8:50 IST
   

ಬೆಂಗಳೂರು: ಧಾರ್ಮಿಕ ಕ್ಷೇತ್ರದಲ್ಲಿ ವಿಶ್ವ ವಿಖ್ಯಾತಿ ಗಳಿಸಿರುವ ಪೇಜಾವರ ಶ್ರೀಗಳ ಜೀವ ದಲಿತ ಬಾಲಕನೊಬ್ಬನಿಂದ ಉಳಿದಿತ್ತು. ಸ್ವತಃ ಪೇಜಾವರರೇ ಈ ವಿಷಯವನ್ನು ಹಲವು ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ.

ದಲಿತ ಕೇರಿಗಳಲ್ಲಿ ಸಂಚಾರ, ದಲಿತರ ಉದ್ಧಾರದ ಪರ ಮಾತನಾಡುತ್ತಿದ್ದ ಶ್ರೀಗಳಿಗೆ ತಮ್ಮ ಪೂರ್ವಾಶ್ರಮದ ಘಟನೆಯೇ ಕಾರಣವಾಗಿತ್ತೆಂಬುದು ಅವರ ಮಾತು.

ಏನದು ಘಟನೆ?

ADVERTISEMENT

ಪೇಜಾವರಸ್ವಾಮಿಗಳು ದಕ್ಷಿಣ ಕನ್ನಡದ ಪುತ್ತೂರಿನ ರಾಮಕುಂಜದವರು. ಆಗ ಅವರು ಐದು ವರ್ಷದ ಬಾಲಕ. ಅವರ ಪೂರ್ವಾಶ್ರಮದ ಹೆಸರು ವೆಂಕಟರಮಣ. ಒಂದು ದಿನ ಎರಟಾಡಿಯ ತಮ್ಮ ತೋಟದಲ್ಲಿ‌ ಆಟವಾಡುವ ವೇಳೆ ವೆಂಕಟರಮಣ ಕೆರೆಗೆ ಬಿದ್ದಿದ್ದ. ಆಗ ಆತನ ಜೊತೆ ಆಗ ಇದ್ದದ್ದು ಆಪ್ತ ಸ್ನೇಹಿತ ಓಡಿ. ಆತ ದಲಿತ. ವೆಂಕಟರಮಣ ಕೆರೆಗೆ ಬಿದ್ದುದನ್ನು ನೋಡಿ ಓಡಿ ಆತಂಕಕ್ಕೀಡಾಗಿದ್ದ. ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಓಡಿಯ ಅಪ್ಪ ಚೋಮ ಕರೆಯ ಬಳಿಗೆ ಧಾವಿಸಿದರೂ, ಕೆರೆಗೆ ಧುಮುಕಿ ವೆಂಕಟರಮಣನನ್ನು ರಕ್ಷಿಸುವಂತಿರಲಿಲ್ಲ. ಕಾರಣ ಅಸ್ಪೃಶ್ಯತೆ. ಆದರೆ, ಇಬ್ಬರೂ ಕೂಗುತ್ತಾ ಮನೆಗೆ ಓಡೋಡಿ ಬಂದು ವೆಂಕಟರಮಣ ಕೆರೆಗೆ ಬಿದ್ದ ಸುದ್ದಿ ಮುಟ್ಟಿಸಿದರು. ವೆಂಕಟರಮಣನ ತಂದೆ ನಾರಾಯಣ ಆಚಾರ್ಯ‌ ಕೆರೆಗೆ ಹಾರಿ ಮಗನನ್ನು ಎತ್ತಿದರು.

ದಲಿತ ಬಾಲಕ ಓಡಿಯಿಂದಾಗಿ ಅಂದು ಪೇಜಾವರ ಶ್ರೀಗಳು ಬದುಕುಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.