ADVERTISEMENT

ಕೊಲೆ ಮತ್ತು ಅತ್ಯಾಚಾರ ಪ್ರಕರಣ ತೀವ್ರ ಘಾಸಿಯುಂಟುಮಾಡಿದೆ: ಪ್ರಿಯಾಂಕಾ ಗಾಂಧಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 5:34 IST
Last Updated 1 ಡಿಸೆಂಬರ್ 2019, 5:34 IST
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ   

ನವದೆಹಲಿ: ಇಡೀ ದೇಶದಾದ್ಯಂತ ಆಕ್ರೋಶದ ಕಿಡಿಯನ್ನು ಹಚ್ಚಿರುವ ಹೈದರಾಬಾದ್‌ನ 26 ವರ್ಷದ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಮತ್ತು ಸಂಬಾಲ್‌ನಲ್ಲಿ 16 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರದ ಪ್ರಕರಣಗಳಿಂದಾಗಿ ತೀವ್ರ ಆಘಾತವಾಗಿದೆ. ಈ ಕುರಿತು ನನ್ನ ಆಕ್ರೋಶವನ್ನು ವ್ಯಕ್ತಪಡಿಸಲು ಯಾವುದೇ ಪದಗಳು ಸಾಕಾಗುವುದಿಲ್ಲ. ಇಂತಹ ಭಯಾನಕ ಘಟನೆಗಳು ನಡೆದಾಗ ಒಂದು ಸಮಾಜವಾಗಿ ನಾವು ಮಾತನಾಡುವುದಕ್ಕಿಂತ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಹಿಂಸೆಯನ್ನು ತಿರಸ್ಕರಿಸುವ, ಮಹಿಳೆಯರನ್ನು ಪ್ರತಿದಿನವೂ ಕ್ರೂರವಾಗಿ ಕಾಡುತ್ತಿರುವ ಅಸಹ್ಯಕರ ದೌರ್ಜನ್ಯ ಒಪ್ಪಿಕೊಳ್ಳುವುದನ್ನುನಿರಾಕರಿಸುವತ್ತ,ನಮ್ಮ ಮನಸ್ಥಿತಿಗಳನ್ನು ಬದಲಿಸುವತ್ತಸಾಗಬೇಕಿದೆ ಎಂದಿದ್ದಾರೆ.

ADVERTISEMENT

ನವೆಂಬರ್ 27ರ ರಾತ್ರಿ ಹೈದರಾಬಾದ್‌ನಲ್ಲಿ ವೈದ್ಯೆ ಕೆಲಸಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ವೇಳೆ ನಾಲ್ವರು ಲಾರಿಚಾಲಕರು ಹಾಗೂ ಕ್ಲೀನರ್‌‌ಗಳು ಅತ್ಯಾಚಾರ ಎಸಗಿ ಬೆಂಕಿ ಹಚ್ಚಿ ಕೊಲೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದೆಡೆ ಕಳೆದ ವಾರ ಉತ್ತರ ಪ್ರದೇಶದ ಸಾಂಬಾದಲ್ಲಿ 16 ವರ್ಷದ ಬಾಲಕಿಯನ್ನು ನೆರೆಮನೆಯವನೇ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ್ದ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಬಾಲಕಿ ಶನಿವಾರ ದೆಹಲಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.