ADVERTISEMENT

Delhi Assembly Election: ದೆಹಲಿ ಸಿಎಂ ಅತಿಶಿ ಬಳಿಯಿದೆ ₹76 ಲಕ್ಷ ಆಸ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜನವರಿ 2025, 13:34 IST
Last Updated 14 ಜನವರಿ 2025, 13:34 IST
<div class="paragraphs"><p>ದೆಹಲಿ ಸಿಎಂ ಅತಿಶಿ</p></div>

ದೆಹಲಿ ಸಿಎಂ ಅತಿಶಿ

   

– ಪಿಟಿಐ

ನವದೆಹಲಿ: ₹30 ಸಾವಿರ ನಗದು, ₹1 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ₹76.93 ಲಕ್ಷ ಚರಾಸ್ತಿ ಹೊಂದಿರುವುದಾಗಿ ದೆಹಲಿ ಮುಖ್ಯಮಂತ್ರಿ ಅತಿಶಿ ಅವರು ಘೋಷಿಸಿಕೊಂಡಿದ್ದಾರೆ.

ADVERTISEMENT

ದೆಹಲಿ ವಿಧಾನಸಭಾ ಚುನಾವಣೆಗೆ ಕಾಲ್ಕಾಜಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ನಂತರ ಅತಿಶಿ ಅವರು ಆಸ್ತಿ ಘೋಷಣೆ ಮಾಡಿದ್ದಾರೆ.

ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿಡವಿಟ್‌ನ ಮಾಹಿತಿ ಪ್ರಕಾರ, ಅತಿಶಿ ಅವರು ಒಟ್ಟು ₹76.93 ಲಕ್ಷ ಚರಾಸ್ತಿ ಹೊಂದಿದ್ದಾರೆ. ಅದರಲ್ಲಿ ₹30 ಸಾವಿರ ನಗದು, 1 ಲಕ್ಷ ಮೌಲ್ಯದ 10 ಗ್ರಾಂ ಚಿನ್ನ, ಉಳಿದ ಹಣ ಎಫ್‌ಡಿಆರ್ ಮತ್ತು ಉಳಿತಾಯ ಖಾತೆಯಲ್ಲಿ ಇರುವುದಾಗಿ ತಿಳಿಸಿದ್ದಾರೆ.

ಅತಿಶಿ ಅವರು ಕಾರು, ಮನೆ ಸೇರಿದಂತೆ ಯಾವುದೇ ಸ್ಥಿರಾಸ್ತಿ ಹೊಂದಿಲ್ಲ. ಗಂಡನ ಆಸ್ತಿಯ ಬಗ್ಗೆಯೂ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿಲ್ಲ.

ಮಾನನಷ್ಟ ಮೊಕದ್ದಮೆ ಸೇರಿದಂತೆ ಒಟ್ಟು 6 ಪ್ರಕರಣಗಳು ಅತಿಶಿ ಅವರ ಮೇಲಿದೆ. ಒಂದು ಪ್ರಕರಣ ಮಣಿಪುರದಲ್ಲಿ ದಾಖಲಾಗಿದೆ.

ಅತಿಶಿ ವಿರುದ್ಧ ಬಿಜೆಪಿ ಅಭ್ಯರ್ಥಿ ರಮೇಶ್ ಸಿಂಗ್ ಬಿಧೂಡಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಅಲ್ಕಾ ಲಾಂಬಾ ಸ್ಪರ್ಧಿಸುತ್ತಿದ್ದಾರೆ

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆ.5ರಂದು ಮತದಾನ ನಡೆಯಲಿದೆ. ಫೆ.8ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.