ನವದೆಹಲಿ:ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಪಡಿತರಆಹಾರ ವಿತರಣಾ (ಡೆಲಿವರಿ) ಯೋಜನೆಗೆದೆಹಲಿ ಸರ್ಕಾರವು ಮಂಗಳವಾರ ಅನುಮೋದನೆ ನೀಡಿದೆ.
ಈ ಯೋಜನೆಗೆ‘ಮುಖ್ಯಮಂತ್ರಿ ಘರ್ ಘರ್ ರೇಷನ್ ರೇಷನ್ ಯೋಜನಾ’ ಎಂದು ಹೆಸರಿಡಲಾಗಿದ್ದು, ಇದೊಂದು ಕ್ರಾಂತಿಕಾರಿ ನಡೆ ಎಂದುದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೇಳಿದರು.
ದೆಹಲಿ ಸಂಪುಟದ ಸಭೆಯಲ್ಲಿ ಯೋಜನೆಗೆ ಅಂಗೀಕಾರ ದೊರೆತಿದೆ. ಟೆಂಡರ್ ಮತ್ತಿತರ ಪ್ರಕ್ರಿಯೆಗಳ ನಂತರ 6–7 ತಿಂಗಳಲ್ಲಿ ಯೋಜನೆ ಜಾರಿಗೆ ಬರುವ ನಿರೀಕ್ಷೆಯಿದೆ.
ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಯೋಜನೆಯು 6–7 ತಿಂಗಳೊಳಗೆ ಜಾರಿಗೆ ಬರಲಿದೆ.‘ಮುಖ್ಯಮಂತ್ರಿ ಘರ್ ಘರ್ ರೇಷನ್ ರೇಷನ್ ಯೋಜನೆಯಡಿ ಗೋಧಿ, ಹಿಟ್ಟು, ಅಕ್ಕಿ, ಸಕ್ಕರೆಯನ್ನು ಶುಚಿಯಾಗಿ ಪ್ಯಾಕ್ ಮಾಡಿ ಜನರ ಮನೆ ಬಾಗಿಲಿಗೆ ವಿತರಣೆ ಮಾಡಲಾಗುವುದು. ಪಡಿತರ ಅಂಗಡಿಯಿಂದಲೂ ಅವರು ನೇರವಾಗಿ ರೇಷನ್ ಅನ್ನು ಪಡೆಯಬಹುದು. ಇದು ಫಲಾನುಭವಿಗಳ ಆಯ್ಕೆಗೆ ಬಿಟ್ಟದ್ದು’ ಎಂದರು.
ಈ ಯೋಜನೆಯೊಂದಿಗೆ ‘ಒಂದು ದೇಶ ಒಂದು ಪಡಿತರ’ ಯೋಜನೆಯೂ ಕೂಡ ಅನುಷ್ಠಾನಕ್ಕೆ ಬರಲಿದೆ ಎಂದು ಕೇಜ್ರಿವಾಲ್ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.