ADVERTISEMENT

ಬ್ರಿಟನ್‌ನಿಂದ ಬರುವ ವಿಮಾನಗಳನ್ನು ಜ.31ರವರೆಗೆ ನಿರ್ಬಂಧಿಸಿ: ಕೇಜ್ರಿವಾಲ್‌

ಏಜೆನ್ಸೀಸ್
Published 7 ಜನವರಿ 2021, 10:46 IST
Last Updated 7 ಜನವರಿ 2021, 10:46 IST
ಅರವಿಂದ್‌ ಕೇಜ್ರಿವಾಲ್‌
ಅರವಿಂದ್‌ ಕೇಜ್ರಿವಾಲ್‌   

ನವದೆಹಲಿ: ರೂಪಾಂತರ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಬ್ರಿಟನ್‌ನಿಂದ ಬರುವ ವಿಮಾನಗಳಿಗೆ ವಿಧಿಸಿರುವ ನಿರ್ಬಂಧವನ್ನು ಜ.31ರವರೆಗೆ ವಿಸ್ತರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂಗ್ಲೆಂಡ್‌ನಲ್ಲಿ ರೂಪಾಂತರ ಕೊರೊನಾ ವೈರಸ್‌ನ ತೀವ್ರತೆ ಗಂಭೀರವಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ಬ್ರಿಟನ್‌ನಿಂದ ಬರುವ ಪ್ರಯಾಣಿಕರ ವಿಮಾನಗಳ ಸಂಚಾರವನ್ನು ಮುಂದಿನ ಹಲವು ದಿನಗಳವರೆಗೆ ಸ್ಥಗಿತಗೊಳಿಸುವಂತೆ ಮನವಿ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.

ನಾಳೆಯಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸಿ ವಿಮಾನ ಸಂಚಾರವನ್ನು ಪುನರಾರಂಭಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಹರದೀಪ್‌ ಸಿಂಗ್‌ ಪುರಿ ಈಗಾಗಲೇ ತಿಳಿಸಿದ್ದಾರೆ.

ADVERTISEMENT

ಕಳೆದ ವಾರ ನಾಗರಿಕ ವಿಮಾನಯಾನ ಸಚಿವಾಲಯವು ಭಾರತ ಮತ್ತು ಬ್ರಿಟನ್‌ ನಡುವೆ ಸಂಚರಿಸುವ ಎಲ್ಲ ವಿಮಾನಗಳನ್ನು ಈ ಬಾರಿ ಸ್ಥಗಿತಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.