ADVERTISEMENT

Delhi Elections Reuslts: ಎಎಪಿಯಿಂದ ಗೆದ್ದ ಪ್ರಮುಖರು, ಸೋತ ಪ್ರಮುಖರು

ಪಿಟಿಐ
Published 8 ಫೆಬ್ರುವರಿ 2025, 10:57 IST
Last Updated 8 ಫೆಬ್ರುವರಿ 2025, 10:57 IST
<div class="paragraphs"><p>ಅರವಿಂದ ಕೇಜ್ರಿವಾಲ್, ಆತಿಶಿ, ಮನೀಶ್ ಸಿಸೋಡಿಯಾ</p></div>

ಅರವಿಂದ ಕೇಜ್ರಿವಾಲ್, ಆತಿಶಿ, ಮನೀಶ್ ಸಿಸೋಡಿಯಾ

   

ನವದೆಹಲಿ: ದೆಹಲಿ ವಿಧಾಸನಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಬಿಜೆಪಿ 26 ವರ್ಷಗಳ ಬಳಿಕ ಅಧಿಕಾರ ಹಿಡಿಯವುದು ಬಹುತೇಕ ಖಚಿತಗೊಂಡಿದೆ.

ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷವು (ಎಎಪಿ) ಭಾರಿ ಮುಖಭಂಗಕ್ಕೊಳಗಾಗಿದೆ. 2015 ಹಾಗೂ 2020ರಲ್ಲಿ ಎಎಪಿ ಭರ್ಜರಿ ಬಹುಮತ ಗಳಿಸಿತ್ತು.

ADVERTISEMENT

ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಎಎಪಿ ಪಕ್ಷದ ಪ್ರಮುಖರಿಗೆ ಸೋಲಾಗಿದೆ.

ಎಎಪಿಯಿಂದ ಸೋತ ಪ್ರಮುಖರು:

*ನವದೆಹಲಿ ಕ್ಷೇತ್ರದಲ್ಲಿ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ 4,089 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

*ಜಂಗ್‌ಪುರದಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರು ಬಿಜೆಪಿ ತನ್ವಿಂದರ್ ಸಿಂಗ್ ವಿರುದ್ಧ 675 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

*ಸಚಿವ ಸೌರಭ್ ಭಾರಧ್ವಾಜ್ ಸೋಲು ಕಂಡಿದ್ದಾರೆ. ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲಿ ಬಿಜೆಪಿಯ ಶಿಕಾ ರಾಯ್ ವಿರುದ್ದ 3,188 ಮತಗಳ ಅಂತರದಿಂದ ಸೋಲನ್ನು ಒಪ್ಪಿಕೊಂಡಿದ್ದಾರೆ.

*ಸತ್ಯೇಂದ್ರ ಜೈನ್‌ಗೆ ಸೋಲು

ಎಎಪಿಯಿಂದ ಗೆದ್ದ ಪ್ರಮುಖರು:

ಎಎಪಿಯ ಘಟಾನುಘಟಿ ನಾಯಕರ ಸೋಲಿನ ನಡುವೆಯೂ ಮುಖ್ಯಮಂತ್ರಿ ಆತಿಶಿ ಸೇರಿದಂತೆ ಕೆಲವು ಪ್ರಮುಖ ನಾಯಕರು ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

*ಕಲ್ಕಾಜಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಆತಿಶಿಗೆ ಗೆಲುವು.

*ಬಾಬರ್‌ಪುರದಲ್ಲಿ ಗೋಪಾಲ್ ರಾಯ್ 18,994 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ.

*ಸುಲ್ತಾನ್‌ಪುರ್ ಮಾಜ್ರಾದಲ್ಲಿ ಮುಕೇಶ್ ಅಹ್ಲಾವತ್ 17,126 ಮತಗಳ ಅಂತರದ ಜಯಭೇರಿ ಮೊಳಗಿಸಿದ್ದಾರೆ.

*ಬಲ್ಲಿಮಾರನ್‌ನಲ್ಲಿ ಇಮ್ರಾನ್ ಹುಸೇನ್ 29,823 ಮತಗಳ ಅಂತರದ ಜಯ ಸಾಧಿಸಿದ್ದಾರೆ.

(ಚುನಾವಣಾ ಆಯೋಗದಿಂದ ಕೆಲವು ಕ್ಷೇತ್ರಗಳ ಫಲಿತಾಂಶಗಳು ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ)

ಚುನಾವಣಾ ಆಯೋಗದ ಪ್ರಕಾರ ಈಗಿನ ಟ್ರೆಂಡ್ (ಸಂಜೆ 4.20):

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.