ನವದೆಹಲಿ: ರಾಷ್ಟ್ರ ರಾಜಧಾನಿಯ ಆದರ್ಶ ನಗರ ಪ್ರದೇಶದ ಸರ್ಕಾರಿ ಶಾಲೆಯೊಂದಕ್ಕೆ ಒಲಿಂಪಿಕ್ಸ್ ಪದಕ ವಿಜೇತ ರವಿಕುಮಾರ್ ದಹಿಯಾ ಅವರ ಹೆಸರನ್ನಿಡುವುದಾಗಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಘೋಷಿಸಿದ್ದಾರೆ.
‘ಒಲಿಂಪಿಕ್ಸ್ ಪದಕ ವಿಜೇತ ರವಿಕುಮಾರ್ ದಹಿಯಾರನ್ನು ಆದರ್ಶ ನಗರದಲ್ಲಿರುವ ಅವರು ಕಲಿತಿದ್ದ ಶಾಲೆಗೆ ಸ್ವಾಗತಿಸಲಾಯಿತು. ಅವರ ಶಿಕ್ಷಕರಿಗೆ ಅದೊಂದು ಭಾವನಾತ್ಮಕ ಕ್ಷಣವಾಗಿತ್ತು. ಶಾಲೆಗೆ ‘ರವಿ ದಹಿಯಾ ಬಾಲ ವಿದ್ಯಾಲಯ’ ಎಂದು ಹೆಸರಿಸಲು ಸರ್ಕಾರ ತೀರ್ಮಾನಿಸಿದೆ’ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ಓದಿ:Tokyo Olympics: ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಭಾರತದ ರವಿ ದಹಿಯಾ
ಇತ್ತೀಚೆಗೆ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್ ಕುಸ್ತಿ ವಿಭಾಗದಲ್ಲಿ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.