ADVERTISEMENT

ದೆಹಲಿಯಲ್ಲಿ ಉಗ್ರರ ದಾಳಿ ಭೀತಿ: ಕೆಂಪುಕೋಟೆ, ಧಾರ್ಮಿಕ ಕೇಂದ್ರಗಳಲ್ಲಿ ಹೈ ಅಲರ್ಟ್‌

ಏಜೆನ್ಸೀಸ್
Published 21 ಫೆಬ್ರುವರಿ 2026, 6:37 IST
Last Updated 21 ಫೆಬ್ರುವರಿ 2026, 6:37 IST
   

ನವದೆದಲಿ: ಕೆಂಪು ಕೋಟೆ ಬಳಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ದೆಹಲಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್‌–ಎ–ತಯಬಾ (ಎಲ್‌ಇಟಿ), ಕೆಂಪು ಕೋಟೆಯ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಚಾಂದನಿ ಚೌಕ್‌ನ ಕೆಲವು ಭಾಗಗಳು ಸೇರಿದಂತೆ ಪ್ರಮುಖ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ 'ಎಎನ್‌ಐ' ವರದಿ ಮಾಡಿದೆ.

ಸಂಘಟನೆಯು, ಸುಧಾರಿತ ಸ್ಫೋಟಕ (ಐಇಡಿ) ದಾಳಿಗೆ ಸಂಚು ರೂಪಿಸುತ್ತಿದೆ. ಚಾಂದನಿ ಚೌಕ್ ಪ್ರದೇಶದಲ್ಲಿರುವ ದೇವಾಲಯವು ಸಂಭಾವ್ಯ ಗುರಿಯಾಗಿರಬಹುದು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಫೆ.6ರಂದು ಪಾಕಿಸ್ತಾನದ ಇಸ್ಲಾಮಾಬಾದ್‌ನ ಮಸೀದಿಯಲ್ಲಿ ನಡೆದ ಸ್ಫೋಟಕ್ಕೆ ಪ್ರತೀಕಾರವಾಗಿ, ಭಾರತದಲ್ಲಿ ಭಾರಿ ದಾಳಿ ನಡೆಸಲು ಸಂಘಟನೆ (ಎಲ್‌ಇಟಿ) ಯೋಜಿಸುತ್ತಿದೆ. ದೇಶದ ಪ್ರಮುಖ ದೇವಾಲಯಗಳನ್ನು ಗುರಿಯಾಗಿಸಬಹುದು ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಅಲ್ಲದೇ ದೇಶದ ಇತರ ಪ್ರಮುಖ ದೇವಾಲಯಗಳು ಸಹ ಎಲ್‌ಇಟಿಯ ಗುರಿಯಾಗಿರಬಹುದು ಎನ್ನಲಾಗಿದೆ.

2025ರ ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡು 12 ಜನ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.