ADVERTISEMENT

ಐಪಿಎಸ್ ಅಧಿಕಾರಿ ಸೋಗಿನಲ್ಲಿ ವಂಚನೆ ಎಸಗಿದ್ದ ವ್ಯಕ್ತಿ ಬಂಧನ 

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 4:20 IST
Last Updated 18 ಮಾರ್ಚ್ 2019, 4:20 IST
ರಾಜ್ ಮಲ್ಹೋತ್ರಾ  (ಕೃಪೆ: ಎಎನ್ಐ)
ರಾಜ್ ಮಲ್ಹೋತ್ರಾ (ಕೃಪೆ: ಎಎನ್ಐ)   

ದೆಹಲಿ: ದೆಹಲಿ ಪೊಲೀಸ್ ಕೆಲಸ ಕೊಡಿಸುವುದಾಗಿ ಹೇಳಿ ಯುವತಿಯೊಬ್ಬಳಿಂದ ₹1 ಲಕ್ಷ ಪಡೆದು ವಂಚಿಸಿದ ನಕಲಿ ಐಪಿಎಸ್ ಅಧಿಕಾರಿಯನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಯುವತಿನೀಡಿದ ದೂರಿನ ಪ್ರಕಾರ ಕಿರಾರಿ ನಿವಾಸಿ ರಾಜ್ ಮಲ್ಹೋತ್ರಾ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲಸ ಕೊಡಿಸುವುದಾಗಿ ಹೇಳಿ ರಾಜ್ ಮಲ್ಹೋತ್ರಾ ಯುವತಿಯಿಂದ₹1 ಲಕ್ಷ ಪಡೆದಿದ್ದ ಎಂದು ಡಿಸಿಪಿ ಎಸ್‍ಡಿ ಮಿಶ್ರಾ ಹೇಳಿದ್ದಾರೆ.

ಜಿಮ್‍ನಲ್ಲಿ ಯುವತಿಯ ಪರಿಚಯವಾಗಿದ್ದ ರಾಜ್, ತಾನು ಐಪಿಎಸ್ ಅಧಿಕಾರಿ ಎಂದು ಹೇಳಿದ್ದು ಮಾತ್ರವಲ್ಲದೆ, ತಾನು ಕ್ಯಾನ್ಸರ್ ರೋಗಿ ಎಂದು ಹೇಳಿದ್ದರು.

ADVERTISEMENT

ಕ್ಯಾನ್ಸರ್ ಇಲ್ಲದೇ ಇರುತ್ತಿದ್ದರೆ ನಾನು ನಿನ್ನನ್ನು ಮದುವೆಯಾಗುತ್ತಿದ್ದೆ ಎಂದು ಯುವತಿಯಲ್ಲಿ ಹೇಳಿದ ಈತ, ನಿನಗೆ ಸರ್ಕಾರಿ ಉದ್ಯೋಗ ಕೊಡಿಸಿ ಜೀವನವಿಡೀ ನೆಮ್ಮದಿಯಾಗಿರುವಂತೆ ಮಾಡುತ್ತೇನೆ ಎಂದಿದ್ದ. ಸರ್ಕಾರಿ ಕೆಲಸ ಕೊಡಿಸುವುದಕ್ಕಾಗಿ ಈತ ಯುವತಿಯಿಂದ ₹1 ಲಕ್ಷ ಪಡೆದಿದ್ದ. ಅಷ್ಟೇ ಅಲ್ಲದೆ ತನ್ನ ಅಪ್ಪ ಸರ್ಕಾರಿ ಉದ್ಯೋಗಿ, ಅಮ್ಮ ಶಿಕ್ಷಕಿ ಮತ್ತು ಸಹೋದರ ಸಬ್ ಇನ್ಸ್ ಪೆಕ್ಟರ್ ಹುದ್ದೆಯಲ್ಲಿದ್ದಾರೆ ಎಂದು ಸುಳ್ಳು ಕತೆ ಕಟ್ಟಿದ್ದ ಎಂದು ಮಿಶ್ರಾ ಹೇಳಿದ್ದಾರೆ.

ಶೋರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಈತನನ್ನು ನಿರ್ಲಕ್ಷಿಸತೊಡಗಿದಾಗ ಆಕೆ ಕೆಲಸ ಮಾಡುತ್ತಿದ್ದ ಶೋರೂಂಗೆ ಪೊಲೀಸ್ ಯುನಿಫಾರ್ಮ್ ಧರಿಸಿ ಹೋಗಿ, ಶೋರೂಂಗೆ ಬೀಗ ಜಡಿಯುವುದಾಗಿ ಬೆದರಿಕೆಯೊಡ್ಡಿದ್ದ. ಇದಾದ ನಂತರ ಯುವತಿ ಅಮನ್ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ರಾಜ್ ಈ ರೀತಿ ವಂಚನೆ ನಡೆಸಿದ್ದು ಇದೇ ಮೊದಲ ಬಾರಿ ಅಲ್ಲ. ಈ ಹಿಂದೆ 2013ರಲ್ಲಿ ಸಬ್ ಇನ್ಸ್ ಪೆಕ್ಟರ್ ಸೋಗಿನಲ್ಲಿ ಈತ ವಂಚನೆ ನಡೆಸಿದ್ದು, ಆ ವೇಳೆ ಈತನಿಂದ ನಕಲಿ ಐಡೆಂಟಿಟಿ ಕಾರ್ಡ್ ನ್ನು ಪೊಲೀಸರು ವಶ ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.