ADVERTISEMENT

ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ ಲಾಕ್‌ಡೌನ್: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಉತ್ತಮ

ಪಿಟಿಐ
Published 1 ಸೆಪ್ಟೆಂಬರ್ 2020, 6:57 IST
Last Updated 1 ಸೆಪ್ಟೆಂಬರ್ 2020, 6:57 IST
ನವದೆಹಲಿಯ ಇಂಡಿಯಾ ಗೇಟ್‌ ಸಮೀಪವಿರುವ ರಜಪತ್ ಮಾರ್ಗದ ದೃಶ್ಯ (ಸಾಂದರ್ಭಿಕ ಚಿತ್ರ)
ನವದೆಹಲಿಯ ಇಂಡಿಯಾ ಗೇಟ್‌ ಸಮೀಪವಿರುವ ರಜಪತ್ ಮಾರ್ಗದ ದೃಶ್ಯ (ಸಾಂದರ್ಭಿಕ ಚಿತ್ರ)   

ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಗಾಳಿಯ ಗುಣಮಟ್ಟ ಉತ್ತಮವಾಗಿರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ – ಲಾಕ್‌ಡೌನ್ ನಿಂದಾಗಿ ವಾಹನ ಸಂಚಾರಕ್ಕೆ ಬ್ರೇಕ್‌ ಬಿದ್ದಿದ್ದು, ಪರಿಸರಕ್ಕೆ ಪೂರಕವಾದ ಗಾಳಿಯ ವೇಗ ಮತ್ತು ಕಳೆದ ತಿಂಗಳು ಉತ್ತಮ ಮಳೆಯಾದ ಕಾರಣ, ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಮಂಗಳವಾರ ಬೆಳಿಗ್ಗೆ 9 ಗಂಟೆ ವೇಳೆಯಲ್ಲಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ 48ರಷ್ಟಿತ್ತು. ಸುರಕ್ಷತಾ ಗಾಳಿಯ ಗುಣಮಟ್ಟ ಸೂಚ್ಯಂಕವು 0 ಯಿಂದ 50ರೊಳಗೆ ಇರಬೇಕು. 51 ರಿಂದ 100 ಸೂಚ್ಯಂಕವಿದ್ದರೆ ಅದು ಗಾಳಿಯ ಗುಣಮಟ್ಟ ಉತ್ತಮವಾಗಿದೆ ಎಂದು ಅರ್ಥ. 101–200ರ ಸೂಚ್ಯಂಕವು ಸಾಧಾರಣ ಗಾಳಿ ಗುಣಮಟ್ಟವನ್ನು ಸೂಚಿಸುತ್ತದೆ. ಉಳಿದಂತೆ 201–300ರ ಸೂಚ್ಯಂಕವು ಗಾಳಿಯ ಗುಣಮಟ್ಟ ಕಳಪೆಯಾಗಿರುವುದನ್ನು ಉಲ್ಲೇಖಿಸುತ್ತದೆ.

ADVERTISEMENT

ಸೋಮವಾರ 24 ಗಂಟೆಗಳ ಸರಾಸರಿ ಗಾಳಿಗುಣಮಟ್ಟದ ಸೂಚ್ಯಂಕ 41 ರಷ್ಟಿತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2015ರಿಂದ ಇಲ್ಲಿವರೆಗೆ ದಾಖಲಿಸಿರುವ ಗಾಳಿಯು ಗುಣಮಟ್ಟ ಸೂಚ್ಯಂಕದಲ್ಲೇ ಇದು ಅತಿ ಕಡಿಮೆ ಸೂಚ್ಯಂಕವಾಗಿದೆ. ಈ ವರ್ಷದಲ್ಲಿ ಐದನೇ ಬಾರಿಗೆ ದೆಹಲಿಯಲ್ಲಿ ಶುದ್ಧಗಾಳಿಯ ಗುಣಮಟ್ಟ ಸೂಚ್ಯಂಕ ದಾಖಲಾಗಿದೆ. ಮಾರ್ಚ್‌ 28, ಆಗಸ್ಟ್‌ 20, ಆಗಸ್ಟ್ 24ರಲ್ಲಿ ದಾಖಲಾದ ಗಾಳಿಯ ಗುಣಮಟ್ಟ ಸೂಚ್ಯಂಕ ಕ್ರಮವಾಗಿ 45,50,50 ಮತ್ತು 45ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.