ADVERTISEMENT

ದೆಹಲಿ: ಮುಂದಿನ ವರ್ಷ ಜ. 28ರಿಂದ ಫೆ. 26ರವರೆಗೆ ಶಾಪಿಂಗ್‌ ಉತ್ಸವ

ಪಿಟಿಐ
Published 6 ಜುಲೈ 2022, 11:33 IST
Last Updated 6 ಜುಲೈ 2022, 11:33 IST
ಅರವಿಂದ ಕೇಜ್ರಿವಾಲಾ
ಅರವಿಂದ ಕೇಜ್ರಿವಾಲಾ   

ನವದೆಹಲಿ: ‘ಮುಂದಿನ ವರ್ಷ ಜನವರಿ 28 ರಿಂದ ಫೆಬ್ರವರಿ 26 ರವರೆಗೆ ದೆಹಲಿಯಲ್ಲಿ ಶಾಪಿಂಗ್ ಉತ್ಸವವನ್ನು ಆಯೋಜಿಸಲಿದ್ದು, ಇದು ದೇಶದ ಅತಿದೊಡ್ಡ ಕಾರ್ಯಕ್ರಮವಾಗಲಿದೆ’ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ತಿಳಿಸಿದ್ದಾರೆ.

‘ಉತ್ಸವವು ದೆಹಲಿಯ ಸಂಸ್ಕೃತಿ, ಸ್ಥಳೀಯ ಆಹಾರ ಸುತ್ತ ಕೇಂದ್ರೀಕೃತವಾಗಿರಲಿದ್ದು, ದೇಶ ಹಾಗೂ ವಿದೇಶದಿಂದ ಅತಿಥಿಗಳು ಬರಲಿದ್ದಾರೆ. ಹಾಗೆಯೇ ಸಾವಿರಾರು ಉದ್ಯೋಗಗಳನ್ನು ಸೃಷ್ಟಿ ಮಾಡುವುದು ಉತ್ಸವದ ಪ್ರಮುಖ ಅಂಶ. ಉತ್ಸವದ ಸಮಯದಲ್ಲಿದೆಹಲಿಗೆ ಭೇಟಿ ನೀಡಲು ಬಯಸುವವರಿಗೆ ವಿಶೇಷ ಪ್ಯಾಕೇಜ್‌ಗಳನ್ನು ಒದಗಿಸಲು ಸರ್ಕಾರವು ಹೋಟೆಲ್‌ಗಳು ಮತ್ತು ವಿಮಾನಯಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಅಲ್ಲದೆ ಪ್ರದರ್ಶನದ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳು ಇರುತ್ತವೆ’ ಎಂದು ಅವರು ಹೇಳಿದರು.

ಈ ವರ್ಷದ ರೋಜ್‌ಗಾರ್ ಬಜೆಟ್‌ ಅಡಿಯಲ್ಲಿ ಕೇಜ್ರಿವಾಲ್ ಸರ್ಕಾರವು ₹250 ಕೋಟಿ ವೆಚ್ಚದಲ್ಲಿ ದೆಹಲಿ ಶಾಪಿಂಗ್ ಉತ್ಸವ ನಡೆಸುವುದಾಗಿ ಹೇಳಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.