ADVERTISEMENT

ಉತ್ತರ ಭಾರತದಲ್ಲಿ ಮುಂದುವರಿದ ಮಳೆ ಅಬ್ಬರ: ಮತ್ತೆ ಅಪಾಯದ ಮಟ್ಟ ಮೀರಿದ ಯಮುನಾ ನದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಆಗಸ್ಟ್ 2023, 2:14 IST
Last Updated 16 ಆಗಸ್ಟ್ 2023, 2:14 IST
ಯಮುನಾ ನದಿ ಪ್ರವಾಹ
ಯಮುನಾ ನದಿ ಪ್ರವಾಹ   –ಪಿಟಿಐ ಚಿತ್ರ

ನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಮಳೆ ಮುಂದುವರಿದಿದ್ದು, ಯಮುನಾ ನದಿ ಪ್ರವಾಹ ಏರಿಕೆಯಾಗಿದೆ.

ದೆಹಲಿಯ ಯಮುನಾ ನದಿಯ ನೀರಿನ ಮಟ್ಟವು ಇಂದು (ಬುಧವಾರ) ಮತ್ತೊಮ್ಮೆ ಅಪಾಯದ ಮಟ್ಟವನ್ನು (205.39 ಮೀಟರ್‌) ಮೀರಿದೆ.

ಮಂಗಳವಾರ ರಾತ್ರಿ 10 ಗಂಟೆ ವೇಳೆಗೆ ನದಿ ನೀರಿನ ಮಟ್ಟ 205.33 ಮೀಟರ್‌ ರಷ್ಟಿತ್ತು ಎಂದು ಕೇಂದ್ರ ಜಲ ಮಂಡಳಿ (ಸಿಡಬ್ಲ್ಯೂಸಿ) ತಿಳಿಸಿದೆ.

ADVERTISEMENT

ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಅಪಾಯ ಮಟ್ಟದಲ್ಲಿದ್ದ ಯಮುನಾ ನದಿ ನೀರಿನ ಹರಿವು ಇತ್ತೀಚೆಗೆ ತುಸು ತಗ್ಗಿತ್ತು. ಆದರೆ, ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ನದಿ ನೀರಿನ ಮಟ್ಟದಲ್ಲಿ ಮತ್ತೆ ಏರಿಕೆಯಾಗಿದೆ.

ಜುಲೈನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಯಮುನಾ ನದಿ ನೀರಿನ ಮಟ್ಟ 45 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದು, 208.65 ಮೀಟರ್‌ನಷ್ಟು ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.