ADVERTISEMENT

ದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಣೆ: ಅಂಬಾಲ ಆಸ್ಪತ್ರೆ ಆವರಣದಲ್ಲೇ ಹೆರಿಗೆ

ಪಿಟಿಐ
Published 10 ಜನವರಿ 2024, 16:08 IST
Last Updated 10 ಜನವರಿ 2024, 16:08 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅಂಬಾಲ: ಹೆರಿಗೆ ನೋವಿನಿಂದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ಮಹಿಳೆಯನ್ನು ವಾರ್ಡ್‌ಗೆ ತಕ್ಷಣ ದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಿಸಿದ್ದು, ಆ ಮಹಿಳೆ ಆಸ್ಪತ್ರೆಯ ಆವರಣದಲ್ಲೇ ವೈದ್ಯಕೀಯ ನೆರವು ಇಲ್ಲದೆ ಮಗುವಿಗೆ ಜನ್ಮ ನೀಡಿರುವ ಘಟನೆ ಇಲ್ಲಿ ನಡೆದಿದೆ. 

ಸೋಮವಾರ ರಾತ್ರಿ ನಡೆದಿರುವ ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ಹರಿಯಾಣ ಆರೋಗ್ಯ ಸಚಿವ ಅನಿಲ್‌ ವಿಜ್‌ ಆದೇಶಿಸಿದ್ದಾರೆ. 

ADVERTISEMENT

ಅಂಬಾಲ ಸಿವಿಲ್‌ ಆಸ್ಪತ್ರೆಯ ಸರ್ಜನ್‌ ಕುಲದೀಪ್‌ ಸಿಂಗ್‌ ಅವರು, ಇಬ್ಬರು ಸದಸ್ಯರ ತಂಡ ರಚಿಸಿ, ಎರಡು ದಿನಗಳೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

30 ವರ್ಷದ ಮಹಿಳೆ ಸುಮನ್‌ ಅವರು ಇದೇ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಸುಮನ್‌ಗೆ ಸೋಮವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಾಗ ಪತಿ ಶಾಲು ಕುಮಾರ್‌ ಆಂಬುಲೆನ್ಸ್‌ ಸಿಗದೆ, ಮೋಟಾಟ್‌ ಬೈಕಿಗೆ ಅಳವಡಿಸಿದ್ದ ಗಾಡಿಯಲ್ಲೇ ಪತ್ನಿಯನ್ನು ಆಸ್ಪತ್ರೆಗೆ ಕರೆತಂದಿದ್ದರು. ಹೆರಿಗೆ ವಾರ್ಡ್‌ಗೆ ಹೋಗಿ, ಪತ್ನಿ ಗಾಡಿಯಲ್ಲೇ ಇರುವ ಬಗ್ಗೆ ಮಾಹಿತಿ ನೀಡಿ ದಾಖಲಿಸಿಕೊಳ್ಳುವಂತೆ ವಿನಂತಿಸಿದ್ದರು. ಆದರೆ, ಸಿಬ್ಬಂದಿ ಆಕೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ಗಾಡಿಯಲ್ಲೇ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದಳು. ಯಾವುದೇ ಸಿಬ್ಬಂದಿ ನೆರವಿಗೆ ಬರಲಿಲ್ಲ ಎಂದು ಶಾಲು ಕುಮಾರ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.