ADVERTISEMENT

ಭಾರತದಲ್ಲಿ ಶೇ 0.5ರಷ್ಟಿರುವ ಜೈನರು ತೆರಿಗೆಯಲ್ಲಿ ಶೇ24 ಪಾಲು ನೀಡುತ್ತಾರೆ: ಸಿಂಗ್

ಪಿಟಿಐ
Published 3 ಅಕ್ಟೋಬರ್ 2025, 14:42 IST
Last Updated 3 ಅಕ್ಟೋಬರ್ 2025, 14:42 IST
<div class="paragraphs"><p>ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌</p></div>

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

   

ಕೃಪೆ: ಪಿಟಿಐ

ಹೈದರಾಬಾದ್‌: ಭಾರತದ ಜನಸಂಖ್ಯೆಯಲ್ಲಿ ಶೇ 0.5ರಷ್ಟಿರುವ ಜೈನ ಸಮುದಾಯದಿಂದ ಶೇ 24ರಷ್ಟು ತೆರಿಗೆ ಸಂಗ್ರಹವಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು ಶುಕ್ರವಾರ ಹೇಳಿದ್ದಾರೆ.

ADVERTISEMENT

ಮೂರು ದಿನಗಳ ಜೆಐಟಿಒ ಕನೆಕ್ಟ್‌ 2025 (ಜೈನ ಅಂತರರಾಷ್ಟ್ರೀಯ ವ್ಯಾಪರ ಸಂಸ್ಥೆ) ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, ಜೈನ ಸಮುದಾಯವು ಜಗತ್ತಿನ ಅತ್ಯಂತ ಪರಿಶ್ರಮ ಜೀವಿಗಳಿರುವ ಸಮೃದ್ಧ ಸಮಾಜವೆಂದು ಪರಿಗಣಿಸಲಾಗಿದೆ ಎಂದರು.

ಈ ಸಮುದಾಯವು ಭಾರತೀಯ ಸಂಸ್ಕೃತಿಯೊಂದಿಗೆ ಆಳವಾಗಿ ಬೇರೂರಿದೆ. ಅದರ ಇತಿಹಾಸವು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಉನ್ನತಿಗೆ ಅಮೂಲ್ಯ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.

ಭಾರತದ ಆರ್ಥಿಕತೆಯಲ್ಲಿ ಜೈನ ಸಮುದಾಯದ ಕೊಡುಗೆ ಮಹತ್ವದ್ದು. ಔಷಧ, ಶಿಕ್ಷಣ ಮತ್ತು ವಾಯುಯಾನ ಕ್ಷೇತ್ರದಲ್ಲೂ ಜೈನರು ಮುಂದಿದ್ದಾರೆ ಎಂದು ಸಿಂಗ್‌ ಹೇಳಿದರು.

---

ಪಾಕಿಸ್ತಾನ ವಿರುದ್ಧದ ದಾಳಿ ವೇಳೆ ಭಾರತ ಧರ್ಮವನ್ನು ನೋಡಿಲ್ಲ. ಪ್ರಜೆಗಳ ರಕ್ಷಣೆ ಮತ್ತು  ಭಾರತದ ಏಕತೆ– ಸಮಗ್ರತೆಗಾಗಿ ದೇಶವು ಯಾವುದೇ ಗಡಿಯನ್ನು ಬೇಕಾದರೂ ದಾಟಬಲ್ಲದು

-ರಾಜನಾಥ್ ಸಿಂಗ್‌ ರಕ್ಷಣಾ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.